ಪೆÇ್ರ. ಜಿ. ವೆಂಕಟಸುಬ್ಬಯ್ಯ ನಿಧನ ಕನ್ನಡ ಸಾಹಿತ್ಯ ಪರಿಷತ್ತು ಸಂತಾಪ

ಯಾದಗಿರಿ:ಎ.20: ಕನ್ನಡದ ಹಿರಿಯ ವಿದ್ವಾಂಸ, ಶ್ರೇಷ್ಠ ನಿಘಂಟು ತಜ್ಞ, ಶತಾಯುಷಿ ಸಾಹಿತಿ, ನಾಡೋಜ ಪೆÇ್ರ. ಜಿ. ವೆಂಕಟಸುಬ್ಬಯ್ಯ ಅವರ ನಿಧನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂತಾಪ ಸೂಚಿಸಿದೆ
“ಇಗೋ ಕನ್ನಡ” ಅಂಕಣ ಬರಹದ ಮೂಲಕ ಮನೆಮಾತಾಗಿದ್ದ ಅವರು 2011 ರಲ್ಲಿ ಬೆಂಗಳೂರಿನಲ್ಲಿ ನಡೆದ 77ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಶ್ರೇಷ್ಟ ಭಾಷಾ ತಜ್ಞ, ನಡೆದಾಡುವ ಶಬ್ದಕೋಶ, ಶಬ್ದಬ್ರಹ್ಮರೆಂದೇ ಜನಜನಿತರಾಗಿದ್ದ ಪೆÇ್ರ. ಜಿ. ವೆಂಕಟಸುಬ್ಬಯ್ಯ ಅಗಲಿಕೆಯಿಂದ ಸಾರಸ್ವತ ಲೋಕದ ಧೃವತಾರೆಯೊಂದು ಕಳಚಿಬಿದ್ದಂತಾಗಿದೆ ಎಂದು ಕ.ಸಾ.ಪ ಅಧ್ಯಕ್ಷ ಡಾ. ಸಿದ್ದಪ್ಪ ಹೊಟ್ಟಿ À್ಡ ಕಂಬನಿ ಮಿಡಿದಿದ್ದಾರೆ.