ಪೆÇೀಷಣ ಅಭಿಯಾನ ಕಾರ್ಯಕ್ರಮ ಆಯೋಜನೆ

(ಸಂಜೆವಾಣಿ ವಾರ್ತೆ)
ಕೆಂಭಾವಿ:ಸೆ.21:ಪಟ್ಟಣದ ವಾರ್ಡನಂ11ರ ಅಂಗನವಾಡಿ ಕೇಂದ್ರದಲ್ಲಿ ಪೆÇೀಷಣ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅಂಗನವಾಡಿ ಮೇಲ್ವಿಚಾರಕಿ ಸುನೀತಾ ಪಾಟೀಲ ಗ್ರಾಮೀಣ ಪ್ರದೇಶದ ಗರ್ಭೀಣಿಯಲ್ಲಿ ಪೌಷ್ಟಿಕ ಮಟ್ಟ ಸುಧಾರಿಸಲು ಇಲಾಖೆಯು ಸಾಕಷ್ಟು ಯೋಜನೆಗಳನ್ನು ತಂದಿದೆ ಗರ್ಭಿಣಿಯರು ಹೆಚ್ವು ತರಕಾರಿ.ಮೊಟ್ಟ ಹಾಲು ಮತ್ತು ಸಿರಿಧಾನ್ಯ ಪದಾರ್ಥಗಳನ್ನು ಸೇವಿಸಿಬೇಕು ಎಂದು ಹೇಳಿದರು,ಕಾರ್ಯಕ್ರಮವನ್ನು ಪುರಸಭೆ ಸದಸ್ಯರಾದ ಶರಣಪ್ಪ ಯಾಳಗಿ ಉದ್ಘಾಟಿಸಿದರು,ಕಾರ್ಯಕ್ರಮದಲ್ಲಿ ಕೇಳಗೇರಿ ಶಾಲೆಯ ಮುಖ್ಯಗುರು ರಾಜಹಮ್ಮದ, ಬಿ ಎಚ್ ಇ ಓ ಗುಲ್ಜರಬೇಗಂ ಅಂಗನವಾಡಿ ಕಾರ್ಯಕರ್ತೆಯರಾದ ಚಂದ್ರಕಲಾ ,ಮಾಲನಬೀ ಬೇಗಂ,ಸಿದ್ದಮ್ಮ ಚಾನಕೋಟಿ, ಸೇರಿದಂತೆ ವಾರ್ಡಿನ ಹಿರಿಯರಾದ ರಾಮಣ್ಣದೊರೆ,ಆಶಾ ಕಾರ್ಯಕರ್ತೆ ಮಲ್ಲಮ್ಮ ಕುಂಬಾರ ಸೇರಿದಂತೆ ಅಡುಗೆ ಸಹಾಯಕಿಯರು
ತಾಯಂದಿರು ಮಕ್ಕಳು ಇದ್ದರು,ಕಾರ್ಯಕ್ರಮದಲ್ಲಿ ವಿಶೇಷವಾಗಿ ಸಿಮಂತ ,ಅಕ್ಷರಾಭ್ಯಾಸ ಮತ್ತು ಅನ್ನ ಪ್ರಾಶನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ,ಕಾರ್ಯಕ್ರಮವನ್ನು ಕವಿತಾ ಮುದ್ನೂರ ನಿರೂಪಿಸಿದರು,ಸಿರಿನ್ ಬೇಗಂ ವಂದಸಿದರು.