ಪೋಷಣೆ ಅಭಿಯಾನ ರಥಯಾತ್ರೆಗೆ ಚಾಲನೆ

ಗುರುಮಠಕಲ್ : ಕೇಂದ್ರ ಸರ್ಕಾರ ಅನೇಕ ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಪೆÇೀಷಣ ಅಭಿಯಾನ ಮಾಸಾಚರಣೆಯ ಅಂಗವಾಗಿ ಗುರುಮಠಕಲ್ ದಲ್ಲಿ ಪೋಷಣೆ ಅಭಿಯಾನ ರಥಯಾತ್ರೆಗೆ ತಹಸೀಲ್ದಾರ ಸಂಗಮೇಶ ಜಿಡಗೆ ಚಾಲನೇ ನೀಡಿದರು.

ಪಟ್ಟಣದ ಬಸ್ ನಿಲ್ದಾಣ ಸ್ಥಳದಲ್ಲಿ 2020-21ನೇ ಸಾಲಿನ ಅಭಿಯಾನದ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಯೋಜನಾಧಿಕಾರಿ ಬೀಮರಾಯ ಕನ್ನೂರ್ ಮಾತನಾಡಿ, ದೇಶದ ಮಕ್ಕಳಲ್ಲಿನ ಅಪೌಷ್ಟಿಕತೆ ಹೆಚ್ಚಿರುವ ಜಿಲ್ಲೆಗಳಲ್ಲಿ ಅಪೌಷ್ಟಿಕತೆ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಈ ಅಭಿಯಾನದ ನಗರ, ಗ್ರಾಮ ಪಂಚಾಯತ ಮಟ್ಟದ ಗ್ರಾಮಗಳಲ್ಲಿ ಪೋಷಣ್ ಮಾಸಾಚರಣೆ ಕುರಿತು ಭತ್ತಿ ಪತ್ರಗಳನ್ನು ವಿತರಣೆ ಮೂಲಕ ಪೆÇೀಷಕರು ತಮ್ಮ ಹೊಲ ಮತ್ತು ಮನೆಗಳ ಖಾಲಿ ಜಾಗದಲ್ಲಿ ತರಕಾರಿ ಹಣ್ಣಿನ ಗಿಡಗಳನ್ನು ಬೆಳೆದು ಮಕ್ಕಳಿಗೆ ತಿನ್ನಿಸುವ ಮೂಲಕ ಪೌಷ್ಟಿಕಾಂಶ ಹೆಚ್ಚಿಸುವಂತೆ ಹಾಗೂ ಸರ್ಕಾರದ ಯೋಜನೆಗಳ ಮೂಲಕ ನೀಡಲಾಗುವ ಹಾಲು ಮೊಟ್ಟೆ ಕಾಳುಗಳ ಸೇವನೆಯಿಂದ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಠಾಣೆಯ ಪಿಎಸ್‍ಐ ಹಣಮಂತ.ಬಿ, ಕಾರ್ಯಕರ್ತೆ ಯಶೋದ, ಕವಿತ, ಗಂಗೋಬಾಯಿ, ಸವಿತ, ಪುಷ್ಪಾ ಸಹಾಯಕಿಯರು ಹಾಗೂ ವಿವಿಧ ಅಧಿಕಾರಿಗಳು ಹಾಜರಿದ್ದರು.