ಪೆÇೀಷಕಾಂಶ ತೋಟದ ಪ್ರಾತ್ಯಕ್ಷಿಕೆ ಕಾರ್ಯಾಗಾರ

ಔರಾದ :ಆ.4: ಬುಧವಾರ ತಾಲೂಕಿನ ವನಮಾರಪಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ರಿಲಯನ್ಸ್ ಫೌಂಡೇಷನ್ ಬೀದರ್ ವತಿಯಿಂದ ರಿಲಯನ್ಸ್ ಪೆÇೀಷಕಾಂಶಗಳ ತೋಟದ ಮಾದರಿಯ ಪ್ರಾತೇಕ್ಷಿತಾ(ಡೆಮೋ) ಕಾರ್ಯಗಾರ ಜರುಗಿತು.

ರಿಲಯನ್ಸ್ ಫೌಂಡೇಷನ್ ವತಿಯಿಂದ ನೀಡುವ ಸಾವಯವ ತರಕಾರಿ ಬೀಜಗಳನ್ನು ಪಡೆದು, ಅವುಗಳನ್ನು ಉತ್ತಮ ರೀತಿಯಿಂದ ಬೆಳಸಿ, ತಾವುಗಳೇ ತಾಜಾ- ತಾಜಾ ಕಾಯಿಪಲ್ಲೆಗಳನ್ನು ಸೇವಿಸಿ ಉತ್ತಮ ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ರಿಲಯನ್ಸ್ ಫೌಂಡೇಷನ್ ಔರಾದ್, ಕಮಲನಗರ ಕಾರ್ಯಕ್ರಮ ಸಂಪನ್ಮೂಲ ವ್ಯಕ್ತಿ (ಪೆÇ್ರೀಗ್ರಾಂ ಫೇಸಿಲೀಟೇಟರ್) ಮಲ್ಲಪ್ಪ ಗೌಡಾ ನುಡಿದರು.

ಬುಧವಾರ ತಾಲೂಕಿನ ವನಮಾರಪಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ರಿಲಯನ್ಸ್ ಫೌಂಡೇಷನ್ ಬೀದರ್ ವತಿಯಿಂದ ರಿಲಯನ್ಸ್ ಪೆÇೀಷಕಾಂಶಗಳ ತೋಟದ ಮಾದರಿಯ ಪ್ರಾತೇಕ್ಷಿತಾ(ಡೆಮೋ) ಕಾರ್ಯಗಾರ ದಲ್ಲಿ ಮಾತನಾಡಿದ ಅವರು, ದೀನೇ-ದೀನೆ ತರಕಾರಿಗಳ ಬೆಲೆ ಗಗನಕ್ಕೆರುತ್ತಿದೆ. ಇದರಿಂದ ಪಾರಾಗಲು ಆಗಲು ಪ್ರತಿಯೊಬ್ಬರು ತಮ್ಮ ಮನೆಯ ಹಿತ್ತಲಿನಲ್ಲಿ, ಶಾಲೆಗಳ ಅಂಗಳದಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ, ಮನೆಯ ಪಕ್ಕದ ಹೋಲಗಳಲ್ಲಿ ರಿಲಯನ್ಸ್ ನವರು ನೀಡುವ ಸಾವಯವ ತರಕಾರಿಯ 16 ನಮೂನೆ ಬೀಜಗಳನ್ನು ಪಡೆದು , ಅವುಗಳನ್ನು ಚೆನ್ನಾಗಿ ಬೆಳೆಸಿ, ಅದರಿಂದ ಬರುವ ತಾಜಾ ತರಕಾರಿಗಳನ್ನು ತಿಂದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲ ಶಕುಂತಲಾ ಪಾಟೀಲ್ ಮಾತನಾಡಿ, ನಮ್ಮ ಹತ್ತಿರ ವಸತಿ ಶಾಲೆ ಇರುವುದರಿಂದ ಈ ತರಕಾರಿ ಬೀಜಗಳನ್ನು ನಾಟಿ ಮಾಡಿ, ನಮ್ಮ ಸಿಬ್ಬಂದಿಗಳು ಹಾಗು ನಮ್ಮ ವಿದ್ಯಾರ್ಥಿಗಳಿಗೆ ಇದರಿಂದ ಬರುವ ಕಾಯಿಪಲ್ಲೆಗಳನ್ನು ಊಟದಲ್ಲಿ ಬಳಸಲು ಅತ್ಯಂತ ಅನುಕೂಲವಾಗಿದೆ. ಹೋರಗಡೆಯಿಂದ ತರಕಾರಿ ತರದೇ ಇದನ್ನೇ ಉತ್ತಮ ರೀತಿಯಿಂದ ಸಂರಕ್ಷಿಸಿ, ತಾಜಾ ತರಕಾರಿಗಳ ಸೇವನೆಗೆ ಆದ್ಯತೆ ನೀಡಲಾಗುವುದೆಂದರು.

ವಸತಿ ಶಾಲೆಯ ಆವರಣದಲ್ಲಿ ರಿಲಯನ್ಸ್ ಪೆÇೀಷಕಾಂಶಗಳ ತೋಟದ ಮಾದರಿ ರಚಿಸಿ, 15*15 ಫೀಟ್ ವಿಸ್ತೀರ್ಣದ ಜಾಗದಲ್ಲಿ 21 ಬೇಡ್ ಗಳನ್ನು ನಿರ್ಮಿಸಿ, 30 ರೀತಿಯ ತರಕಾರಿ ಬೀಜಗಳನ್ನು ನಾಟಿ ಮಾಡಲಾಯಿತು.

ಈ ಸಂದರ್ಭದಲ್ಲಿ, ಮಾಲ್ತೇಶ ಕೋಟ್ಟೂರ್, ರವೀಂದ್ರ ಕರಮಣಿ, ರಾಜೇಂದ್ರ, ರವಿಕುಮಾರ್, , ಸಂತೋಷ ರಾಜೆಪ್ಪ, ಕಲ್ಪನಾ, ಪ್ರೇಮಾ, ಸುರೇಖಾ, ಸಂತೋಷ ಚ್ಯಾಂಡೆಸುರೆ ಸೇರಿದಂತೆ ಇತರರಿದ್ದರು.