ಪೆÇೀಷಕಾಂಶಯುಕ್ತ ರಾಗಿಮಾಲ್ಟ್ ದೈಹಿಕ ಬೆಳವಣಿಗೆಗೆ ಅನುಕೂಲ: ಸೀತಾರಾಮು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಫೆ.23: ಎಳೆಯ ವಯಸ್ಸಿನ ಮಕ್ಕಳಿಗೆ ಶಾಲಾ ಹಂತದಲ್ಲಿ ಬಹು ಪೆÇೀಷಕಾಂಶಯುಕ್ತ ಸಾಯಿಶ್ಯೂರ್ ರಾಗಿ ಮಾಲ್ಟ್ ಶಾಲಾ ವಿದ್ಯಾರ್ಥಿಗಳ ಬೌದ್ದಿಕ, ದೈಹಿಕ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಮು ತಿಳಿಸಿದರು.
ಅವರು ತಾಲ್ಲೂಕಿನ ಬೂಕನಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಮತ್ತು ಪ್ರಾಥಮಿಕ ಶಾಲಾ ವಿಭಾಗದ ಮಕ್ಕಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ನ ಸಹಯೋಗದೊಂದಿಗೆ ಬಹು ಪೆÇೀಷಕಾಂಶಯುಕ್ತ ಹಾಲು ಮಿಶ್ರಿತ ರಾಗಿ ಮಾಲ್ಟನ್ನು ಮಕ್ಕಳಿಗೆ ವಿತರಿಸುವ ಮೂಲಕ ಉಧ್ಘಾಟಿಸಿದರು.
ಪ್ರತಿದಿನ ಅಡುಗೆ ಸಿಬ್ಬಂದಿಗಳು ಮಕ್ಕಳಿಗೆ ಹಾಲು ನೀಡುವ ಸಂದರ್ಭದಲ್ಲಿ ಸಾಯಿಶ್ಯೂರ್ ರಾಗಿ ಮಾಲ್ಟ್ ನೀಡಬೇಕಿದೆ. ಪ್ರತಿ ಮಗುವಿಗೆ ಐದು ಗ್ರಾಂ ಸಾಯಿಶ್ಯೂರ್ ರಾಗಿಮಾಲ್ಟ್ ಪೌಡರ್ ಅನ್ನು ಶುದ್ದ ನೀರಿಗೆ ಹಾಕಿ ಗಂಟುಗಳು ಅಥವಾ ಉಂಡೆಗಳಾಗದಂತೆ ಎಚ್ಚರಿಕೆ ವಹಿಸಿ ಕಾಯಿಸಿ ನಂತರ 10 ಗ್ರಾಂ ಸಕ್ಕರೆಯೊಂದಿಗೆ 18 ಗ್ರಾಂ ಹಾಲಿನಪುಡಿಯೊಂದಿಗೆ ಮಿಶ್ರಣ ಮಾಡಿ ತಯಾರಿಸಿ ಮಕ್ಕಳಿಗೆ ನೀಡಬೇಕು ಹಾಲು ಮಾಲ್ಟ್ ಕಾಯಿಸಲು ಶುದ್ಧ ನೀರನ್ನು ಬಳಸಬೇಕು.
ಚೆನ್ನಾಗಿ ಕಾಯಿಸಿ ಆರಿಸಿದ ನಂತರ ಮಕ್ಕಳನ್ನು ಸಾಲಾಗಿ ಕೂರಿಸಿ ಪ್ರತಿ ಮಗುವಿಗೆ 150ಎಂ.ಎಲ್ ಪ್ರಮಾಣದಂತೆ ವಿತರಣೆ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಿ.ಎಂ.ಪೆÇೀಷಣ್ ಅಭಿಯಾನ್ ಸಹಾಯಕ ನಿರ್ದೇಶಕ ಸಿ.ಎನ್.ಯತೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಾಮ್‍ಪ್ರಸಾದ್ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹೆಳವೇಗೌಡ, ಮುಖಂಡ ವೆಂಕಟೇಶ್, ಎಸ್ಡಿಎಂಸಿ ಅಧ್ಯಕ್ಷರುಗಳು ಮುಖ್ಯ ಶಿಕ್ಷಕರಾದ ನಾಗೇಶ್, ಮಂಗಳಮ್ಮ, ಶಿಕ್ಷಣ ಸಂಯೋಜಕ ವೇಣುಗೋಪಾಲ್, ಸಮೂಹ ಸಂಪನ್ಮೂಲ ಕೇಂದ್ರ ವ್ಯಕ್ತಿ ನಾಗೇಂದ್ರ ಸೇರಿದಂತೆ ಶಾಲಾ ಮಕ್ಕಳು ಶಿಕ್ಷಕ ವರ್ಗದವರು ಹಾಜರಿದ್ದರು.