ಪೆÇೀಲೀಸರ ಕಾರ್ಯ ಶ್ಲ್ಯಾಘನೀಯ

ಧಾರವಾಡ ಮೇ. 4–ಕರ್ನಾಟಕದಲ್ಲಿ ನಿತ್ಯ ಪೆÇಲೀಸರು ಕೊರೊನಾ ಸೋಂಕು ಪೀಡಿತರಾದರು. ಪೆÇಲೀಸರು ಕೋವಿಡ್‍ಗೆ ತುತ್ತಾಗಿ ಜೀವ ತ್ಯಜಿಸಿದರು. ಆದರೂ ಧೃತಿಗೆಡದೆ ಪ್ರತೀ ದಿನ, ಪ್ರತೀ ಕ್ಷಣ ಸಮಾಜದ ಸುರಕ್ಷೆಗಾಗಿ ಪ್ರಾಣವನ್ನೂ ಲೆಕ್ಕಿಸದೆ ನಿಸ್ವಾರ್ಥ ಮನೋಭಾವದಿಂದ ಸುರಕ್ಷಿತ ಸಮಾಜಕ್ಕಾಗಿ ಧೈರ್ಯದಿಂದ ವೀರ ಯೋಧರಂತೆ ಸದಾ ಕರ್ತವ್ಯದಲ್ಲಿ ತೊಡಗಿಸಿಕೊಂಡವರು ನಮ್ಮ ಪೆÇಲೀಸರು ಎಂದು ಡಾ.ಕವನ ದೇಶಪಾಂಡೆ ಹೇಳಿದರು.
ಅವರು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಕರ್ತವ್ಯ ನಿರತ ಟ್ರಾಪಿಕ ಪೆÇೀಲಿಸರು, ಡಿಆರ್ ಪೆÇೀಲಿಸರು, ಸಿವಿಲ್ ಪೆÇೀಲಿಸ ಸಿಬ್ಬಂದಿಗಳಿಗೆ ಮಾಸ್ಕ, ಸ್ಯಾನಿಟೈಜರ ವಿತರಿಸಿ ಕೋವಿಡ್ ಕುರಿತು ಜಾಗೃತಿ ಮಾಡಲಾಯಿತು.
ಡಾ.ಉಮೇಶ ಹಳ್ಳಿಕೇರಿ ಮಾತನಾಡಿ ವೈದ್ಯರ ನಂತರ ನಿತ್ಯ ಕೋವಿಡ್ ಜೊತೆ ಹೋರಾಡಿದವರು ಪೆÇೀಲಿಸರು ಮತ್ತು ಅವರ ನಿತ್ಯ ಕಾರ್ಯದ ಬಗ್ಗೆ ಮಾತನಾಡಿದರು.
ರೆಡ್ ಕ್ರಾಸ್ ಸದಸ್ಯರಾದ ಮಾರ್ತಾಂಡಪ್ಪ ಕತ್ತಿ ಮಾತನಾಡಿ, ಕಳೆದ ವರ್ಷ ಮತ್ತು ಈ 2ನೇ ಅಲೆಯ ಕೋವಿಡನ ಲಾಕ್ಡೌನ್ ಘೊಷಣೆಯಾದ ಸಮಯದಲ್ಲಿ ಕೋವಿಡ್‍ದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಮನೆಯೊಳಗೆ ಇದ್ದು ಪ್ರತಿ ನಿತ್ಯ ಯಾರ ಸಂಪರ್ಕಕ್ಕೂ ಬಾರದೆ ಕೋವಿಡ್‍ದಿಂದ ಬಚಾವಾಗಲು ಎಷ್ಟೆಲ್ಲ ದಾರಿಗಳನ್ನು ಹುಡುಕಿದೆವು! ಅದೇ ಪೆÇಲೀಸರು ಮನೆಯಿಂದ ಹೊರಬಂದು ನಮಗೇನಾದರೂ ಸರಿ, ಸಮಾಜವನ್ನು ಸುರಕ್ಷಿತವಾಗಿಡೋಣ ಎಂದು ರಸ್ತೆ, ಬೀದಿ ಮತ್ತು ತಪಾಸಣೆ ಠಾಣೆಗಳಲ್ಲಿ ಧೃತಿಗೆಡದೆ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಹೇಳಿದರು.
ಡಾ.ಧೀರಜ ವೀರನಗೌಡರ ಮಾತನಾಡಿ, ನಮ್ಮ ಪರಿಸರವನ್ನು ನಾವು ಕಾಪಾಡಿಕೊಳ್ಳದಿದ್ದರೆ ಇಂತಹ ವೈರಸ್‍ನಿಂದ ನಿತ್ಯ ಹೋರಾಡುವ ಸಂದರ್ಭ ಬರಬಹುದು. ಹಾಗಾಗಿ ನಮ್ಮ ನಮ್ಮ ಪರಿಸರದ ಜೊತೆಗೆ ನಿಸರ್ಗವನ್ನು ಅಂದವಾಗಿಟ್ಟುಕೊಳ್ಳಲು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಟ್ರಾಪಿಕ ಪೆÇೀಲಿಸರು, ಡಿಆರ್ ಪೆÇೀಲಿಸರು, ಸಿವಿಲ್ ಪೆÇೀಲಿಸರು ಇದ್ದರು.