ಪೆÇೀಲಿಸ್ ಇಲಾಖೆಯಿಂದ ಜಿಲ್ಲೆಯಾದ್ಯಂತ ಅನವಶ್ಯಕವಾಗಿ ಹೊರಗೆ ಬಂದವರ ವಾಹನ ಸೀಜ್

ವಿಜಯಪುರ, ಏ.29-ಕೊರೋನಾ ತಡೆಗಟ್ಟಲು 14 ದಿನಗಳ ಕಾಲ ಸರ್ಕಾರ ಲಾಕ್ ಡೌನ್ ಮಾಡಿ ಎರಡನೇ ದಿನಕ್ಕೆ ಇಳಿದಿರುವ ಪ್ರಯುಕ್ತ ನಗರದ ಗಾಂಧಿ ವೃತ್ತದಲ್ಲಿ ಪೆÇೀಲಿಸರು ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಅನವಶ್ಯಕವಾಗಿ ಓಡಾಡುವ ವಾಹನಗಳನ್ನು ಸೀಜ್ ಮಾಡುತ್ತಿದ್ದಾರೆ.
ನಗರದ ಬಹುತೇಕ ಒಳ ರಸ್ತೆಗಳಿಗೆ ಬ್ಯಾರೀಕೇಡ್ ಹಾಕಿ ಸಂಚಾರ ಬಂದ್ ಮಾಡಿದ್ದು ಪ್ರಮುಖ ರಸ್ತೆಗಳ ಮೂಲಕವೇ ಜನರು ಓಡಾಟ ಮಾಡಬೇಕಿದೆ. ಇನ್ನೂ ಅನವಶ್ಯಕವಾಗಿ ಹೊರಗೆ ಬಂದವರ ವಾಹನವನ್ನು ಜಿಲ್ಲೆಯಾದ್ಯಂತ ಸೀಜ್ ಮಾಡುತ್ತಿದ್ದಾರೆ.
ಗಡಿಯಲ್ಲಿ ಕಟ್ಟೆಚ್ಚರ ವಹಿಸಿದ ಪೆÇೀಲಿಸರು ಕೋವಿಡ್ ರಿಪೆÇರ್ಟ ತಂದವರಿಗೆ ಮಾತ್ರ ಒಳಗೆ ಬಿಟ್ಟುಕೊಳ್ಳುತ್ತಿದ್ದಾರೆ.
ತರಕಾರಿ ಖರೀದಿಸಲು ಮುಗಿಬಿದ್ದ ಜನತೆಃ ಕೊರೊನಾ ತಡೆಗಟ್ಟಲು ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 14 ದಿನ ಲಾಕ್ ಡೌನ್ ಹಿನ್ನಲೆ ಆದೇಶಿಸಲಾಗಿದ್ದು, ಬೆಳಿಗ್ಗೆ 6 ರಿಂದ 10ಗಂಟೆ ವರೆಗೆ ತರಕಾರಿ ಖರೀದಿಗೆ ಅನುಮತಿ ಹಿನ್ನಲೆಯಲ್ಲಿ ಜನತೆ ತರಕಾರಿ ಖರೀದಿಸಲು ವಿಜಯಪುರ ದಲ್ಲಿ ಮುಗಿಬಿದ್ದಿದ್ದಾರೆ.
ವಿಜಯಪುರ ನಗರದ ಗೋಲಗುಂಬಜ್ ರಸ್ತೆಯಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ಯಾವುದೇ ಕೋವಿಡ್ ನಿಯಮ ಪಾಲಿಸದೇ ಖರೀದಿಯಲ್ಲಿ ತೊಡಗಿದ್ದರು.
ಕ್ರಮ ಕೈಗೊಳ್ಳಬೇಕಾದ ಪೆÇೀಲಿಸ್ ಹಾಗೂ ಪಾಲಿಕೆ ಸಿಬ್ಬಂದಿ ಎಲ್ಲಿಯೂ ಕಂಡುಬರಲಿಲ್ಲ.