ಪೆÇೀರ್ಟಲ್ ಸಹಾಯದಿಂದ ಕಳೆದುಹೋಗಿದ್ದ 15 ಮೊಬೈಲ್‍ಗಳ ವಶ

ಚಾಮರಾಜನಗರ, ಏ.01:- ಜಿಲ್ಲೆಯಾದ್ಯಂತ ಕಳೆದು ಹೋಗಿರುವ, ಕಳ್ಳತನವಾಗಿರುವ ವಿವಿಧ ಠಾಣೆಗಳಲ್ಲಿ ವರದಿಯಾಗಿದ್ದ ಮೊಬೈಲ್‍ಗಳ ವಿವರಗಳನ್ನು hಣಣಠಿs://ತಿತಿತಿ.ಛಿeiಡಿ.gov.iಟಿ ಪೋರ್ಟಲ್‍ನಲ್ಲಿ ದಾಖಲಿಸಿದ್ದು, ಸದರಿ ವಿವರಗಳನ್ನು ಆಧರಿಸಿ ಸುಮಾರು ರೂ.2,71.574/- ಮೌಲ್ಯದ ವಿವಿಧ ಕಂಪನಿಯ ಒಟ್ಟು 15 ಮೊಬೈಲ್‍ಗಳನ್ನು ಪತ್ತೆ ಹಚ್ಚಲಾಯಿತು.
ಕಾರ್ಯಾಚರಣೆಯಲ್ಲಿ ಎಸ್‍ಪಿ. ಪದ್ವಿನಿ ಸಾಹೂ, ಐ.ಪಿ.ಎಸ್, ಎ.ಎಸ್.ಪಿ. ಟಿ.ಜೆ ಉದೇಶ್, ಚಾಮರಾಜನಗರ ಉಪ ವಿಭಾಗದ ಡಿವೈಎಸ್‍ಪಿ ಪ್ರಿಯದರ್ಶಿನಿ ಈ ಸಾಣಿಕೊಪ್ಪ, ಡಿಸಿಆರ್‍ಬಿ ವಿಭಾಗದ ಡಿವೈಎಸ್‍ಪಿ,ಅನ್ಸರ್ ಅಲಿ ರವರುಗಳ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯ ಮತ್ತು ಅಂತರ ರಾಜ್ಯಗಳಲ್ಲಿ ಪತ್ತೆ ಹಚ್ಚಿ, ವಶಕ್ಕೆ ಪಡೆದುಕೊಂಡು ಈ ದಿನ ಸಂಬಂಧಪಟ್ಟ ವಾರಸುದಾರರಿಗೆ ನೀಡಲಾಯಿತು.
ಈ ಕಾರ್ಯಾಚರಣೆಯಲ್ಲಿ ಸಿ.ಇ.ಎನ್. ಅಪರಾಧ ಪೆÇಲೀಸ್ ಠಾಣೆಯ ಪೆÇಲೀಸ್ ಅಧಿಕಾರಿಗಳಾದ ಇನ್ಸ್‍ಪೆಕ್ಟರ್ ಹೆಚ್.ಆನಂದಕುಮಾರ್, ಸಬ್ ಇನ್ಸ್‍ಪೆಕ್ಟರ್‍ಗಳಾದ ವೀರಣ್ಣಾರಾಧ್ಯ, ಆರ್ ಸಿದ್ದರಾಜು, ಮತ್ತು ಸಿಬ್ಬಂದಿಗಳಾದ ಶೀನಿವಾಸಮೂರ್ತಿ, ಎಂ. ಮಹೇಶ್, ರಮ್ಯಾ, ಅಬ್ದುಲ್ ಖಾದರ್, ಪಲ್ಲವಿ, ಭೀಮಪ್ಪ ಇಂಡಿ, ಮಾದಲಾಂಬಿಕೆರವರುಗಳು ಭಾಗವಹಿಸಿರುತ್ತಾರೆ.
ಇವರ ಕಾರ್ಯವನ್ನು ಪೆÇಲೀಸ್ ವರಿಷ್ಠಾಧಿಕಾರಿ ಪದ್ಮಿನಿಸಾಹು ಪ್ರಶಂಸಿಸಿರುತ್ತಾರೆ.