(ಸಂಜೆವಾಣಿ ವಾರ್ತೆ)
ಅಂಕೋಲಾ,ಜು28 : ಬೈಕ್‍ನಲ್ಲಿ ಸಾಗುತ್ತಿದ ಇಬ್ಬರು ಪೆÇಲೀಸ್ ಸಿಬ್ಬಂದಿಗಳಿಗೆ, ಆಟೊವೊಂದು ಅಪಘಾತಪಡಿಸಿ ನಾಪತ್ತೆಯಾದ ಘಟನೆ ಪಟ್ಟಣದ ಬಸ್ ನಿಲ್ದಾಣ ಎದುರು ಗುರುವಾರ ಮದ್ಯಾಹ್ನ ನಡೆದಿದೆ.
ಅಂಕೋಲಾ ಠಾಣೆಯ ಎಸೈ ಬಾಬು ಆಗೇರ ಹಾಗೂ ಹವಾಲ್ದಾರ ಪ್ರೇಮಾನಂದ ಗಾಂವಕರ ಅವರಿಗೆ ಗಾಯಗಳಾಗಿದ್ದು ಅವರಿಗೆ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡಿದ್ದಾರೆ.
ಎಸೈ ಬಾಬು ಆಗೇರ ಹಾಗೂ ಹವಾಲ್ದಾರ ಪ್ರೇಮಾನಂದ ಗಾಂವಕರ ಅವರು ಕರ್ತವ್ಯದ ನಿಮಿತ್ತ ವಾಸರಕುದ್ರಿಗೆ ಗ್ರಾಮಕ್ಕೆ ಬೈಕನಲ್ಲಿ ತೆರಳಿದ್ದರು. ತಮ್ಮ ಕರ್ತವ್ಯ ಮುಗಿಸಿ ಅಂಕೋಲಾ ಠಾಣೆಗೆ ಆಗಮಿಸುತ್ತಿದ್ದ, ವೇಳೆ ಕೆ.ಸಿ.ರಸ್ತೆಯಿಂದ ಒಮ್ಮೆಲೆ ಬಂದ ಆಟೊ ಇವರಿಗೆ ಗುದ್ದಿ ಅಘಘಾತಪಡಿಸಿದೆ. ಅಪಘಾತಪಡಿಸಿ ನಾಪತ್ತೆಯಾದ ಆಟೊದ ಹಾಗೂ ಅದರ ಚಾಲಕನ ಪತ್ತೆಗೆ ಪೆÇಲೀಸರು ಮುಂದಾಗಿದ್ದಾರೆ.
ಬೈಕ್ ರಿಕ್ಷಾದೊಳಗೆ ಸಿಲುಕಿಹಾಕಿಕೊಂಡಿತ್ತು ಎನ್ನಲಾಗಿದ್ದು, ಹತ್ತಿರದಲ್ಲೆ ಇದ್ದ ಆಟೊ ಚಾಲಕರು, ನೆಲಕ್ಕೆ ಬಿದ್ದ ಪೆÇಲೀಸ ಸಿಬ್ಬಂದಿಗಳನ್ನ ಉಪಚರಿಸಿದ್ದಾರೆ. ಪೆÇಲೀಸರು ಸ್ಥಳಕ್ಕೆ ತೆರಳಿ ಈ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.