ಪೆÇಲೀಸ್ ಇಲಾಖೆ ಸೇವೆ ಪೂರ್ವಜನ್ಮದ ಪುಣ್ಯ: ಅಂಬಲಿ

ಧಾರವಾಡ, ಏ.2: ಪೆÇಲೀಸ್ ಇಲಾಖೆಯಲ್ಲಿ ಸೇವೆಗೆ ಸೇರಿ, ಕರ್ತವ್ಯ ನಿರ್ವಹಿಸುವುದು ನಮ್ಮ ಪೂರ್ವಜನ್ಮದ ಪುಣ್ಯ. ಪೆÇಲೀಸ್ ಸೇವೆ ಧೈರ್ಯ, ತ್ಯಾಗ, ಬಲಿದಾನ ಮತ್ತು ಹೆಮ್ಮೆಯ ಪ್ರತೀಕ ಎಂದು ನಿವೃತ್ತ ಡಿವೈಎಸ್.ಪಿ ನಾಗರಾಜ ಅಂಬಲಿ ಹೇಳಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾ ಪೆÇಲೀಸ್ ಇಲಾಖೆಯಿಂದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಆಯೊಜಿಸಿದ್ದ 2021 ನೇ ಸಾಲಿನ ಪೆÇಲೀಸ್ ಧ್ವಜ ದಿನಾಚರಣೆ ಮತ್ತು ನಿವೃತ್ತರ ಸೇವಾ ಸುಸ್ಮರಣೆ ಹಾಗೂ ಗೌರವ ಸಮರ್ಪಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಶಿಸ್ತು, ಸೇವೆಗೆ ಹೆಸರಾದ ಪೆÇಲೀಸ್ ಇಲಾಖೆ ದೇಶದ ಆಂತರಿಕ ಭದ್ರತೆ,ಸಾರ್ವಜನಿಕರ ನೆಮ್ಮದಿಯ ಬದುಕಿಗೆ ಭರವಸೆ ಮೂಡಿಸಿ, ವಿಶ್ವಾಸ ತುಂಬುವ ಮಹತ್ವದ ಕಾರ್ಯವನ್ನು ಮಾಡುತ್ತದೆ. ಧಾರವಾಡ ಪೆÇಲೀಸ್ ವರಿಷ್ಠಾಧಿಕಾರಿಗಳು ಪೆÇಲೀಸ್ ಧ್ವಜ ದಿನಾಚರಣೆಗೆ ನಿವೃತ್ತ ಪೆÇಲೀಸ್ ಅಧಿಕಾರಿ, ಸಿಬ್ಬಂದಿಗಳನ್ನು ಆಹ್ವಾನಿಸಿ, ಅವರ ಸೇವೆ ಸ್ಮರಿಸುವ ಮತ್ತು ಗೌರವಿಸುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಇದು ಪೆÇಲೀಸ್ ಇಲಾಖೆಯಲ್ಲಿ ಹೊಸ ಮತ್ತು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ತಮ್ಮ ಸೇವೆಯನ್ನು ಇಲಾಖೆ ನೆನಪಿಸಿ, ಗೌರವಿಸುವುದು ನಮ್ಮ ಸಾರ್ಥಕತೆ ಆಗಿದೆ ಎಂದು ನಾಗರಾಜ ಅಂಬಲಿ ಅವರು ಹೇಳಿದರು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ವರ್ಷದಂತೆ ಪೆÇಲೀಸ್ ಧ್ವಜ ದಿನಾಚರಣೆ ಜೊತೆಗೆ ಪೆÇಲೀಸ್ ಇಲಾಖೆಯಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಅವರ ಸೇವೆಯನ್ನು ಸ್ಮರಿಸುವ ಮೂಲಕ ಗೌರವ ನೀಡಿ, ಕೃತಜ್ಞತೆ ಸಲ್ಲಿಸುವ ಹಾಗೂ ಯುವ ಅಧಿಕಾರಿಗಳಿಗೆ ಪೆÇ್ರತ್ಸಾಹ ನೀಡಲಾಗುತ್ತಿದೆ.
ಕಳೆದ ವರ್ಷದ ಪೆÇಲೀಸ್ ಧ್ವಜ ಮಾರಾಟದಿಂದ ಸಾರ್ವಜನಿಕರಿಂದ ಪೆÇಲೀಸ್ ಕಲ್ಯಾಣ ನಿಧಿಗೆ ಸುಮಾರು 10,76,950 ರೂ.ಗಳ ದೇಣಿಗೆ ಸಂಗ್ರಹಿಸಲಾಗಿದೆ. ಈ ಮೊತ್ತದಲ್ಲಿ 5,38,475 ರೂ.ಗಳನ್ನು ಘಟಕದ ನಿವೃತ್ತ ಪೆÇಲೀಸ್ ಅಧಿಕಾರಿಗಳ ಕ್ಷೇಮನಿಧಿಗೆ, 2,69,237 ರೂ.ಗಳನ್ನು ಘಟಕದ ಸೇವಾನಿರತ ಪೆÇಲೀಸ್ ಕಲ್ಯಾಣ ನಿಧಿಗೆ ಮತ್ತು 2,69, 238 ರೂ.ಗಳನ್ನು ಕೇಂದ್ರ ಪೆÇಲೀಸ್ ಕಲ್ಯಾಣ ನಿಧಿಗೆ ಜಮಾ ಮಾಡಲಾಗಿದೆ ಎಂದು ಅವರು ಹೇಳಿದರು.
ಎಸ್.ಪಿ. ಕೃಷ್ಣಕಾಂತ ಅವರು ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಡಿವೈಎಸ್ ಪಿ ನಾಗರಾಜ ಅಂಬಲಿ ಅವರಿಗೆ ಪೆÇಲೀಸ ಧ್ವಜ ವಿತರಿಸಿದರು.
ಕಾರ್ಯಕ್ರಮದಲ್ಲಿ ಡಿ.ವೈ.ಎಸ್.ಪಿ ಎಮ್.ಬಿ.ಸಂಕದ ಸೇರಿದಂತೆ ಪೆÇಲೀಸ್ ಇಲಾಖೆ ಹಿರಿಯ ಅಧಿಕಾರಿಗಳು, ನಿವೃತ್ತ ಅಧಿಕಾರಿ ಸಿಬ್ಬಂದಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
ಡಿ.ಎ.ಆರ್. ವಿಭಾಗದ ಆರ್.ಪಿ.ಐ ಆಗಿರುವ ಜಿ.ಸಿ. ಡೂಗನವರ ನೇತೃತ್ವದಲ್ಲಿ ವಿವಿಧ ಪ್ಲಟೂನ್ ತಂಡಗಳು ಪರೇಡ್ ಮೂಲಕ ಗೌರವ ಸಲ್ಲಿಸಿದರು.
ಡಿ.ಎ.ಆರ್.ವಿಭಾಗದ ಡಿವೈಎಸ್ ಪಿ ಜಿ.ಸಿ.ಶಿವಾನಂದ ವಂದಿಸಿದರು. ಡಾ.ವೈ.ಪಿ.ಕಲ್ಲನಗೌಡರ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನಿತ ನಿವೃತ್ತ ಅಧಿಕಾರಿಗಳು:
ಸಮಾರಂಭದಲ್ಲಿ ನಿವೃತ್ತ ಪೆÇಲೀಸ್ ಅಧಿಕಾರಿಗಳಾದ ಬಿ.ವ್ಹಿ.ಉಪ್ಪಿನ, ಎಮ್.ಎ.ಶೇಖ, ಎಸ್.ಎಮ್.ಚವ್ಹಾಣ, ಎಮ್.ಎಸ್.ಅಚ್ಚಮ್ಮನವರ, ಸಿ.ಎಮ್.ಯಾದವಾಡ, ಆರ್.ಸಿ.ಗಂಡಲಾಟಿ, ಬಿ.ಟಿ.ಶಿಗ್ಲಿ, ಸಿ.ಕೆ.ಯರಗಂಬಳಿಮಠ, ಕೆ.ವಿ.ಶಿದ್ದನಗೌಡರ, ಎಮ್.ಆರ್.ಕಾಳೆ, ಎಮ್.ಆರ್.ಕಾಳೆ, ಎಮ್.ಸಿ.ಕಂಗೂರಿ, ವಾಯ್.ಎಸ್.ಬಡಿಗೇರ, ಎಮ್.ಎಚ್.ಜಮಾಲಖಾನವರ, ಎಚ್.ಎನ್.ಬಡ್ನಿ, ಆರ್.ಎನ್.ಕಲಘಟಗಿ, ಮಹಿಳಾ ಪಿಎಸ್.ಐ ಬಿ.ಎನ್.ಕುಲಕರ್ಣಿ, ಪಿ.ವಾ.ಕಾಳಿ, ಎಮ್.ಬಿ.ಹೆಬ್ಬಾಳ, ಎಮ್.ಎಮ್.ಹಳಕಟ್ಟಿ, ಬಿ.ಎ.ಹಜೇರಿ ಮತ್ತು ಡಿ.ವಾಯ್.ಜಗತಾಪ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.