
ಬೀದರ್:ಎ.2: ಪೆÇಲೀಸರು ನಿಷ್ಠಾವಂತರಾಗಿ ಕೆಲಸ ಮಾಡಿದಾಗ ಮಾತ್ರ ನಮ್ಮ ಇಲಾಖೆ ಮತ್ತು ನಮಗೆ ಒಳ್ಳೆಯ ಹೆಸರು ಬರುತ್ತದೆ ಎಂದು ನಿವೃತ್ತ ಪಿ.ಎಸ್.ಐ. ನಾಗನಾಥ ಹೇಳಿದರು.
ಇಂದು ಬೀದರ ಜಿಲ್ಲಾ ಪೆÇಲೀಸ್ ವತಿಯಿಂದ ಹಮ್ಮಿಕೊಂಡಿದ್ದ ಪೆÇಲೀಸ್ ಧ್ವಜ ದಿನಾಚರಣೆ – 2023 ರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಪೆÇಲೀಸ ಕೆಲಸ ಸಮಾಜದಲ್ಲಿ ಬಹಳ ಜವಾಬ್ದಾರಿ ಕೆಲಸವಾಗಿದ್ದು ನಿಷ್ಠಾವಂತರಾಗಿ ಕೆಲಸ ಮಾಡುವವರಿಗೆ ಪ್ರತಿ ಫಲ ಸಿಕ್ಕೆ ಸಿಗುತ್ತದೆ ಹಾಗೂ ಯಾವುದೇ ಕೆಲಸವಿದ್ದರೆ ತಮ್ಮ ಮೇಲಧಿಕಾರಿಗಳ ಗಮನಕ್ಕೆ ತಂದು ಕೆಲಸ ಮಾಡಬೇಕೆಂದು ಅಂದಿನ ಕಾಲದಲ್ಲಿ ನಾವು ಕೆಲಸ ಮಾಡುವಾಗ ಇಷ್ಟೊಂದು ಸೌಲಭ್ಯಗಳು ನಮಗೆ ಇರಲಿಲ್ಲ ಕೆಲವೊಂದು ಗ್ರಾಮಗಳಿಗೆ ಹೋಗಲು ಬಸ್ಸುಗಳ ಸೌಲಭ್ಯಗಳು ಇರಲಿಲ್ಲ ಇಂದು ತಮಗೆ ತಾಂತ್ರಿಕತೆಯಿಂದಾಗಿ ಹಲವಾರು ಸೌಲಭ್ಯಗಳು ಇವೆ ಎಂದರು.
ಪೆÇಲೀಸರು ಆರೋಗ್ಯ ಸೌಲಭ್ಯ ಪಡೆಯಲು ದೂರದ ಪ್ರದೇಶ ಬೆಂಗಳೂರಿಗೆ ಹೋಗಬೇಕಾಗುತ್ತದೆ ಹಾಗಾಗಿ ಬೀದರ ಅಥವಾ ಸಮೀಪದ ಹೈದರಾಬಾದ್ ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವ್ಯವಸ್ಥೆ ಮಾಡಬೇಕು ಹಾಗೂ ಪೆÇಲೀಸ್ ಕಾಲನಿ ಮತ್ತು ಪೆÇಲೀಸರು ವಾಹನ ಖರೀದಿಸಲು ಅವರಿಗೆ ಲೋನ ಕೊಡುವ ವ್ಯವಸ್ಥೆ ಆಗಬೇಕೆಂದು ಹೇಳಿದರು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್. ಎಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ 1965 ರ ಏಪ್ರಿಲ್ 2 ರಂದು ಜಾರಿಗೆ ಬಂದ ಪೆÇಲೀಸ್ ಕಾಯ್ದೆ ಸವಿ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ ಮತ್ತು ನಿವೃತ್ತಿ ಹೊಂದಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಸ್ಮರಿಸಲಾಗುತ್ತದೆ.
ಜಿಲ್ಲೆಯಲ್ಲಿ ಪೆÇಲೀಸರಿಗಾಗಿ ಹಲವಾರು ಕಲ್ಯಾಣ ಕಾರ್ಯಕ್ರಮಗಳು ನಡೆಯುತ್ತಿವೆ ಪೆÇಲೀಸರ ಮಕ್ಕಳು ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಹೆಚ್ಚು ಅಂಕ ಪಡೆಯುವ ಮಕ್ಕಳಿಗೆ ಬಹುಮಾನ.ಕಂಪ್ಯೂಟರ್ ತರಬೇತಿ ಕೇಂದ್ರ. ಟೆನ್ನಿಸ್ ಕೋರ್ಟ್. ಸ್ಟೆಡಿಯಂ. ಪೆÇಲೀಸ್ ಜಿಮ್. ನಿವೃತ್ತ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಆರೋಗ್ಯ ಸೌಲಭ್ಯ. ಗುರುತಿನ ಚೀಟಿ ಸೇರಿದಂತೆ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ನಮ್ಮ ಇಲಾಖೆಯಿಂದ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಪೆÇಲೀಸ್ ಧ್ವಜ ಬಿಡುಗಡೆ. ರಾಷ್ಟ್ರ ಧ್ವಜ. ಪೆÇಲೀಸ್ ಧ್ವಜಗಳ ಆಗಮನ. ಮತ್ತು ಪೆÇಲೀಸ್ ಪಡೆಯ 6 ತುಕಡಿಗಳು ಕಾರ್ಯಕ್ರಮಕ್ಕೆ ಅಗಮಿಸಿದ ಗಣ್ಯರಿಗೆ ಗೌರವ ವಂದನೆ ಸಲ್ಲಿಸಿದವು.
ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ. ಹೆಚ್ಚುವರಿ ಪೆÇೀಲಿಸ್ ಅಧಿಕ್ಷಕರಾದ ಮಹೇಶ ಮೇಘಣ್ಣವರ. ಸೇರಿದಂತೆ ಪೆÇಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು