ಪೆರುವಾಜೆ : ನೂತನ ಬಸ್ಸು ತಂಗುದಾಣ ಉದ್ಘಾಟನೆ

ಸುಳ್ಯ:ಪೆರುವಾಜೆ ಗ್ರಾಮ ಪಂಚಾಯಿತಿಯ ಎದುರುಗಡೆ ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಹಾಗೂ ಭಾವೈಕ್ಯ ಯುವಕ ಮಂಡಲ ಸಹಭಾಗಿತ್ವದಲ್ಲಿ ಯುವಕ ಮಂಡಲದ ಪೂರ್ವಾಧ್ಯಕ್ಷ ದಿ.ಪ್ರೇಮನಾಥ ರೈಯವರ ಸ್ಮರಣಾರ್ಥವಾಗಿ ನಿರ್ಮಿಸಿದ ನೂತನ ಬಸ್ಸು ತಂಗುದಾಣವನ್ನು ಇತ್ತಿಚೆಗೆ ಉದ್ಘಾಟಿಸಲಾಯಿತು.
ರೋಟರಿಯ ಜಿಲ್ಲಾ ಗವರ್ನರ್ ರಂಗನಾಥ್ ಭಟ್ ಉದ್ಘಾಟನೆ ನೆರವೇರಿಸಿದರು, ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಸಚ್ಚಿದಾನಂದ, ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಅಧ್ಯಕ್ಷ ಮೋನಪ್ಪ ತಂಬಿನಮಕ್ಕಿ, ಗ್ರಾ.ಪಂ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ನಿಯೋಜಿತ ಅಧ್ಯಕ್ಷ ರೊ.ಪದ್ಮನಾಭ ಬೀಡು, ರೊ.ನವೀನ ರೈ ತಂಬಿನಮಕ್ಕಿ, ರೊ.ರವೀಂದ್ರ ಮರಕ್ಕಡ, ರೊ.ವಿನಯ ಕುಮಾರ್, ರೊ.ಪ್ರಭಾಕರ ಆಳ್ವ, ರೊ.ಪ್ರಮೋದ್ ಕುಮಾರ್ ಕುಂಟುಪುಣಿಗುತ್ತು, ರೊ.ಕರುಣಾಕರ ಆಳ್ವ, ರೊ.ಎ.ಕೆ.ಮಣಿಯಾಣಿ, ರೊ.ಪ್ರಭಾಕರ ಆಳ್ವ ಬಜನಿಗುತ್ತು, ರೊ.ಶಶಿಧರ ಬಿ.ಕೆ. ಮತ್ತು ಪದಾಧಿಕಾರಿಗಳು, ಪೆರುವಾಜೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ, ಗ್ರಾಮ ಪಂಚಾಯಿತಿ ಸದಸ್ಯ ಪದ್ಮನಾಭ ಶೆಟ್ಟಿ ಪೆರುವಾಜೆ, ದಿ.ಪ್ರೇಮನಾಥ್ ರೈಯವರ ಸಹೋದರ ಪ್ರೀತಂ ರೈ , ಪೆರುವಾಜೆ ಶಾಲಾ ಎಸ್.ಡಿ.ಯಂ.ಸಿ.ಯ ಅಧ್ಯಕ್ಷ ಉದಯ ಗಣೇಶ್ ಅರ್ನಾಡಿ, ಭಾವೈಕ್ಯ ಯುವಕ ಮಂಡಲದ ಗೌರವಾಧ್ಯಕ್ಷ ಜಯಪ್ರಕಾಶ್ ರೈ ಪೆರುವಾಜೆ, ಅಧ್ಯಕ್ಷ ವಾಸುದೇವ ಪೆರುವಾಜೆ ಹಾಗೂ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.