ಪೆರುವಾಜೆ ದೇವಸ್ಥಾನದಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಶಾಸಕರಿಂದ ಗುದ್ದಲಿ ಪೂಜೆ

ಸುಳ್ಯ, ನ.೪-ಪೆರುವಾಜೆ ಉದ್ಭವ ಶ್ರೀ ಜಲದುರ್ಗಾದೇವೀ ದೇವಸ್ಥಾನದ ಯಾತ್ರಿ ನಿವಾಸ ನಿರ್ಮಾಣಕ್ಕೆ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಿಂದ ೨೭.೫ ಲಕ್ಷ ರೂ.ಮಂಜೂರಾಗಿದ್ದು ಯಾತ್ರಿ ನಿವಾಸ ನಿರ್ಮಾಣಕ್ಕೆ ಶಾಸಕರು ಗುದ್ದಲಿ ಪೂಜೆಯನ್ನು ನ.೧ ರಂದು ನೆರವೇರಿಸಿದರು.
ದೇವಸ್ಥಾನಕ್ಕೆ ಮಳೆಗಾಲದ ಸಂದರ್ಭದಲ್ಲಿ ಹಲವು ಬಾರಿ ನೀರು ಒಳನುಗ್ಗಿದ್ದು ಇದರ ಬಗ್ಗೆ ಜಲದುರ್ಗಾದೇವಿ ದೇವಸ್ಥಾನದ ಭಕ್ತರು ಶಾಸಕರಲ್ಲಿ ಮನವಿ ಮಾಡಿಕೊಂಡರು.
ಮನವಿಗೆ ಸ್ಪಂದಿಸಿದ ಶಾಸಕರು ಅತೀ ಶೀಘ್ರದಲ್ಲಿ ನೀರು ದೇವಸ್ಥಾನದ ಒಳ ಬಾರದ ರೀತಿಯಲ್ಲಿ ಶಾಶ್ವತ ಯೋಜನೆ ಕೈಗೊಳ್ಳಲಾಗುವುದೆಂದು ಭರವಸೆಯನ್ನು ನೀಡಿದರು ಮತ್ತು ಅಧಿಕಾರಿಗಳಿಗೆ ತುರ್ತು ಆದೇಶವನ್ನು ಕೂಡ ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ಶ್ರೀನಿವಾಸ್ ಹೆಬ್ಬಾರ್, ಆಡಳಿತ ಅಧಿಕಾರಿ ಪದ್ಮನಾಭ ಕೆ, ವಸಂತ ಪೆರುವಾಜೆ, ಪದ್ಮನಾಭ ಶೆಟ್ಟಿ, ಜಯಪ್ರಕಾಶ ರೈ,ಜಗನ್ನಾಥ ರೈ, ವೆಂಕಟಕೃಷ್ಣರಾವ್ ಪೆರುವಾಜೆ, ಭಾಗ್ಯಲಕ್ಷ್ಮಿ ಅರ್ನಾಡಿ, ರಾಮಣ್ಣ ರೈ ವೈಪಾಲ, ವಾಸುದೇವ ನಾಯಕ್ ಏನಡ್ಕ, ದಾಮೋದರ ನಾಯ್ಕ ಪೆಲತಡ್ಕ, ಲೋಕನಾಥ್ ಶೆಟ್ಟಿ, ಬೆಳ್ಳಾರೆ ಪೊಲೀಸ್ ನಿರೀಕ್ಷಕರಾದ ಆಂಜನೇಯ ರೆಡ್ಡಿ, ನಾಗೇಶ್ ಪೂಜಾರಿ ಕೊಲ್ಯ, ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಚನಿಯ ಕುಂಡಡ್ಕ, ಕೆ ಆರ್ ಡಿ ಎಲ್ ಇಂಜಿನಿಯರ್ ಮೋಹಿತ್, ಭಾಸ್ಕರ್ ಕೋಟ್ಯಾನ್, ಸಚಿನ್ ಭಟ್, ಕೊರಗಪ್ಪ ಕೊಟ್ಟೆಕಾಯಿ, ವಿಜಯ ಪೆರುವಾಜೆ, ಹಾಗೂ ಇನ್ನಿತರ ಭಕ್ತರು ಉಪಸ್ಥಿತರಿದ್ದರು.