ಪೆಪ್ಪರ್ ಮಶ್ರೂಮ್

ಬೇಕಾಗುವ ಸಾಮಗ್ರಿಗಳು

*ಮಶ್ರೂಮ್ – ೩
*ಈರುಳ್ಳಿ – ೨
*ಹಸಿರು ಮೆಣಸಿನಕಾಯಿ – ೪
*ಅರಿಶಿಣ – ೧ ಚಮಚ
*ಕಾಳು ಮೆಣಸಿನ ಪುಡಿ – ೧ ಚಮಚ
*ಗರಂ ಮಸಾಲ – ೧ ಚಮಚ
*ಕೊತ್ತಂಬರಿ ಸೊಪ್ಪು – ಸ್ವಲ್ಪ
*ಉಪ್ಪು -ರುಚಿಗೆ ತಕ್ಕಷ್ಟು
*ಎಣ್ಣೆ – ೧/೨ ಬೌಲ್

ಮಾಡುವ ವಿಧಾನ :

ಪ್ಯಾನ್‌ಗೆ ಎಣ್ಣೆ ಹಾಕಿ. ಬಿಸಿಯಾದ ನಂತರ ಈರುಳ್ಳಿ ಹಾಕಿ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ. ಇದಕ್ಕೆ ಹಸಿರು ಮೆಣಸಿನಕಾಯಿ, ಮಶ್ರೂಮ್, ಅರಿಶಿಣ, ಉಪ್ಪು ಸೇರಿಸಿ ಚೆನ್ನಾಗಿ ಹುರಿಯಿರಿ. ಕೊನೆಯಲ್ಲಿ ಕಾಳುಮೆಣಸಿನ ಪುಡಿ, ಗರಂ ಮಸಾಲ, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದರೆ ರುಚಿರುಚಿಯಾದ ಪೆಪ್ಪರ್ ಮಶ್ರೂಮ್ ಸವಿಯಲು ಸಿದ್ಧ.