
ಸಂಜೆ ವಾಣಿ ವಾರ್ತೆ
ಕೊಟ್ಟೂರು, ಸೆ.04: ನಾವು ಹಲವು ವರ್ಷಗಳ ಕಾಲ ಕೆಎಸ್ಆರ್ಟಿಸಿ, ಬಿಎಂಟಿಸಿ, ಕೋ ಆಪರೇಟಿವ್ ಅನೇಕ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ 2014 ರೊಳಗೆ ನಿವೃತ್ತಿ ಹೊಂದಿದ್ದ ನೌಕರರ ಪಿಂಚಣಿ ಕೇವಲ 1000 ರೂ ಗಳು ಮಾತ್ರ ಸಿಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಪೆನ್ಷನ್ ಕೊಡಬೇಕು ಎಂದು ಕೇಳುವುದು ನಮ್ಮ ಜನ್ಮ ಸಿದ್ಧ ಹಕ್ಕು ಎಂದು ರಾಷ್ಟ್ರೀಯ ಸಂಘರ್ಷ ಸಮಿತಿಯ ರಾಷ್ಟ್ರೀಯ ಸಂಯೋಜಕರಾದ ರಮಾಕಾಂತ್ ಹೇಳಿದರು.
ಪಟ್ಟಣದ 108 ಶಿವಲಿಂಗ ಆವರಣದಲ್ಲಿ ರಾಷ್ಟ್ರೀಯ ಸಂಘರ್ಷ ಸಮಿತಿ ಕೊಟ್ಟೂರು ವತಿಯಿಂದ ಇಪಿಎಸ್ 95 ಪಿಂಚಣಿದಾರರ ಸಮಾವೇಶವನ್ನು ಹಮ್ಮಿಕೊಳ್ಳಲಾಯಿತು. ಈ ಸಮಾವೇಶವನ್ನು ಕುರಿತು ಮಾತನಾಡಿದರು.
ಕೆ.ಎಸ್. ಆರ್. ಟಿ. ಸಿ, ಬಿ.ಎಂ.ಟಿ.ಸಿ ಕೋ ಆಪರೇಟಿವ್, ಏನ್. ಎಂ. ಡಿ. ಸಿ, ಇನ್ನು ಮುಂತಾದ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ 2014 ರೊಳಗೆ ನಿವೃತ್ತಿ ಹೊಂದಿದ ನೌಕರರಿಗೆ ಅತಿ ಕಡಿಮೆ ಪೆನ್ಷನ್ ಬರುತ್ತಿದ್ದು ಅವರು ಪರಿಸ್ಥಿತಿ ಅದೋಗತಿಯಾಗಿದೆ. ನಾವು ಅನೇಕ ವರ್ಷ ಇಲಾಖೆಗಳಲ್ಲಿ ದುಡಿದಿದ್ದೇವೆ. 75 ಲಕ್ಷದ 86 ಸಾವಿರ ನಿವೃತ್ತ ಪೆನ್ಷನ್ ದಾರರು ಇದ್ದಾರೆ. ಕೇಂದ್ರ ಸರ್ಕಾರವು ನಮಗೆ 30% ಸಹ ಪೆನ್ಷನ್ ನೀಡುತ್ತಿಲ್ಲ, ನಿವೃತ್ತಿ ಹೊಂದಿದ ನೌಕರರಿಗೆ ಕಿಮ್ಮತ್ತು ಕೊಡುತ್ತಿಲ್ಲ. ಕೇಂದ್ರ ಸರ್ಕಾರವು ಮುಂದಿನ ಚುನಾವಣೆಯ ಬರುವ ಮುಂಚೆ ಇಪಿಎಸ್ 95 ಪಿಂಚಣಿ ವಂಚಿತ ನೌಕರರಿಗೆ ನೌಕರರ ರೂ.7500 ವರೆಗೆ ಏರಿಕೆ ಮಾಡಬೇಕು ಡಿಎ ಮತ್ತು ವೈದ್ಯಕೀಯ ವೆಚ್ಚ ಸಹ ಬರಿಸಬೇಕು, ಇಲ್ಲದಿದ್ದರೆ 75 ಲಕ್ಷದ 86 ಸಾವಿರ ನಿವೃತ್ತ ನೌಕರರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷರಾದ ಗೋಪಿನಾಥ್, ಸಮಿತಿಯ ಖಜಾಂಚಿ ಕುಲಕರ್ಣಿ, ಅನಿಲ್ ಇನಾಂದಾರ್, ಹಾಗೂ ನಿವೃತ್ತಿ ಪೆನ್ಷನ್ ದಾರರು ಹಾಗೂ ಇತರರು ಉಪಸ್ಥಿತರಿದ್ದರು.
ನಿರೂಪಣೆ ಶಿವಕುಮಾರ್ ನೆರವೇರಿಸಿದರು. ಸ್ವಾಗತ ಚೆನ್ನ ಬಸಯ್ಯ ನೆರವೇರಿಸಿದರು. ಅಧ್ಯಕ್ಷತೆ ಧರ್ಮರಾಜ್ ವಹಿಸಿದ್ದರು.