ಪೆನ್ನೋಬಳಂ ಜಲಾಶಯ ಭರ್ತಿ
ಪ್ರವಾಸಿಗರ ಆಕರ್ಷಣೆ


ಬಳ್ಳಾರಿ, ಸೆ.12: ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ  ಕುಡೇರು ಮಂಡಲದ ಜಲ್ಲಿಪಲ್ಲಿಯ ಬಳಿ  ಹರಿಯುವ ಪೇನ್ನಾ ಹೋಬಿಲಂ ನದಿಗೆ ಪಿಎಬಿಆರ್ ಡ್ಯಾಂ ಮೊದಲ ಬಾರಿಗೆ ಭರ್ತಿಯಾಗಿ  ಬೃಹತ್ ಪ್ರಮಾಣದ ನೀರನ್ನು  ನದಿಗೆ ಬಿಡಲಾಗಿದ್ದು.  ಡ್ಯಾಂ ವೀಕ್ಷಣೆಗೆ ಜನರು ತಂಡೋಪತಂಡವಾಗಿ ಆಗಮಿಸತೊಡಗಿದ್ದಾರೆ.
ಈ ಜಲಾಶಯವನ್ನು 1978ರಲ್ಲಿ  ನಿರ್ಮಿಸಲಾಗಿದ್ದು, 11.10 ಟಿಎಂಸಿ ಸಾಮರ್ಥ್ಯ ಹೊಂದಿದೆ, ಕೃಷಿ, ಕುಡಿಯುವ ನೀರು, ಮೀನುಗಾರಿಕೆ ಮುಖ್ಯ ಉದ್ದೇಶ, ಕಳೆದ ನಾಲ್ಕು ದಶಕಗಳಲ್ಲೇ  ಇದೆ ಮೊದಲ ಬಾರಿಗೆ  ನದಿಗೆ ನೀರುಬಿಡಲಾಗಿದೆ.
ಜಲಾಶಯದಿಂದ ಎಡ ಮತ್ತು ಬಲ ಕಾಲುವೆಗಳಿಗೆ ಅಲ್ಲದೆ ನದಿಗೂ ನೀರು ಬಿಡಲಾಗಿದೆ.
ಹಿಂದೂಪುರ,ಪೆರುರು ಭಾಗಗಳಲ್ಲಿ ವ್ಯಾಪಕವಾಗಿ ಮಳೆಯಾಗುತಿದ್ದು ಇನ್ನೂ ಹೆಚ್ಚಿನಪ್ರಮಾಣ  ನೀರು ಹರಿದು ಬರುವ ಸಾಧ್ಯತೆ ಇದೆ.
 ಜನಸಾಗರ:
ಕರ್ನಾಟಕ ಮತ್ತು ಆಂಧ್ರ ಪ್ರದೇಶದ ವಿವಿಧಡೆಗಳಿಂದ   ಜನರು ತಂಡೋಪ ತಂಡವಾಗಿ  ಜಲಾಶಯದ ನಯನ ಮನೋಹರ ದೃಶ್ಯ ನೋಡಲು ಬರುತ್ತಿದ್ದಾರೆ.  43 ವರ್ಷಗಳ ನಂತರ ನದಿಯನ್ನು ಸೇರುವ ನೀರಿನ ತವಕದ ಮನೋ ರಮಣೀಯ ದೃಶ್ಯವನ್ನು ನೋಡಿದ ಜನ ಸಂತಸಪಡುತ್ತಿದ್ದಾರೆ.