ದಾವಣಗೆರೆ ಮಾ 23; ಕಥೆ ಕವನ ಕಾದಂಬರಿಗಳನ್ನು ಓದುವಂತೆ ಮಕ್ಕಳನ್ನು ಉತ್ತೇಜಿಸುವ ಜವಾಬ್ದಾರಿ ಪೋಷಕರದ್ದಾದರೆ , ಅವುಗಳನ್ನು ಬಿತ್ತರಿಸಿ ಓದುಗರನ್ನು ಉತ್ತೇಜಿಸುವ ಜವಾಬ್ದಾರಿ ಪತ್ರಿಕೆಗಳದ್ದಾಗಿರುತ್ತದೆ ಎಂದು ಡಾ. ರವಿಕುಮಾರ್ ಎಜೆ ತಿಳಿಸಿದರು. ವಿದ್ಯಾನಗರದ ನೂತನ ಕಾಲೇಜು ಬಳಿ ಇರುವ ನಿರ್ವರ್ಣ ಆರ್ಟ್ ಗ್ಯಾಲರಿಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಿದ್ದ ಸ್ವರಚಿತ ಕವನ ವಾಚನ ಸ್ಪರ್ಧೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಾಧ್ಯಾಪಕರಾದ ಪರಮೇಶ್ವರಪ್ಪ ಟಿವಿ ಧಾರಾವಾಹಿ ಮೊಬೈಲ್ ಬಿಟ್ಟು ಪೆನ್ನು ಪೇಪರ್ ಹಿಡಿದಾಗ ಮಾತ್ರ ಸ್ವ ಬೆಳವಣಿಗೆ ಹಾಗೂ ಸಾಹಿತ್ಯ ಬೆಳವಣಿಗೆ ಆಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಈ ಸಮಾರಂಭದಲ್ಲಿ ಸುಮಾರು 17 ವರ್ಷಗಳಿಂದ ಹಾಗೂ ನಾಲ್ಕು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಸಾಧನೆಗೈಯುತ್ತಿರುವ ಕನ್ನಡ ಭಾರತಿ ಪತ್ರಿಕೆಯ ವರದಿಗಾರರಾದ ಶ್ರೀಮತಿ ದೇವಿಕಾ ಸುನಿಲ್ ಹಾಗೂ ಜಿಲ್ಲಾ ಸಮಾಚಾರ ಪತ್ರಿಕೆಯ ಉಪಸಂಪಾದಕರಾದ ಶ್ರೀಮತಿ ಭಾರತಿ ವೀರೇಶ್ ರವರಿಗೂ ಹಾಗೂ ಸೋಮೇಶ್ವರ ಶಾಲೆಯ ಎಂಟನೇ ತರಗತಿಯಲ್ಲಿ ಓದುತ್ತಿರುವ ವೇಟ್ ಲಿಫ್ಟ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಸುಕೃತ ಜಿ ಹಾಗೂ ರಾಜ್ಯಮಟ್ಟದ ಯೋಗ ಪಟುವಾದ ಭಾರದ್ವಾಜ್ ಎಸ್ ಪಿ ರವರನ್ನು ಸನ್ಮಾನಿಸಲಾಯಿತು, ಅಂತೆಯೇ ಸ್ವರಚಿತ ಕವನ ವಾಚನದಲ್ಲಿ ಭಾಗವಹಿಸಿ ಚೈತ್ರ ವಿಜೆ ದರ್ಶನ್ ಹೆಚ್ ಎಸ್ ಮತ್ತು ಕರಿಯಪ್ಪ ಇವರು ಕವನ ವಾಚನ ಮಾಡಿ ಪ್ರತಿಭಾ ಪುರಸ್ಕಾರಕ್ಕೆ ಭಾಜನರಾದರು. ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ಹರೀಶ್ ಕಾರ್ಯಕ್ರಮ ನಿರೂಪಿಸಿದರೆ, ತರಳಬಾಳು ಶಾಲೆಯ ವಿದ್ಯಾರ್ಥಿ ಯಶವಂತ್ ಪ್ರಾರ್ಥಿಸಿದರು, ಮತ್ತು ಶ್ರೀಮತಿ ದೀಪ ಎಂ ಅತಿಥಿಗಳನ್ನು ಸಭಿಕರನ್ನು ಸ್ವಾಗತಿಸಿದರೆ ನಾಗರಾಜ್ ಕೆ ರವರು ಪ್ರಾಸ್ತಾವಿಕ ನುಡಿಗಳನ್ನಡಿದರು. ಅಂತ್ಯದಲ್ಲಿ ಸಿದ್ದಗಂಗಾ ಶಾಲೆಯ ಸಹ ಶಿಕ್ಷಕಿಯಾದ ಶ್ರೀಮತಿ ತನುಜ ವಂದನಾರ್ಪಣೆ ಮಾಡಿದರು ಈ ಕಾರ್ಯಕ್ರಮದಲ್ಲಿ ಪರಿಷತ್ತಿನ ಇನ್ನಿತರ ಪದಾಧಿಕಾರಿಗಳಾದ ಸುರೇಶ್ ಶ್ರೀಮತಿ ರೇಖಾ ಹಾಗೂ ಕುಮಾರ್ ಅವರು ಉಪಸ್ಥಿತರಿದ್ದರು.