ಪೆನ್ನಡ್ರೈವ್ ಹಗರಣ:ಸಿಎಂ, ಡಿಸಿಎಂ ನೇರ ರೂವಾರಿ

ಕನಕಪುರ.ಮೇ೮-ಪ್ರಜ್ವಲ್ ರೇವಣ್ಣನವರಿಗೆ ಸಂಬಂಧಿಸಿದ್ದೆಂದು ಹೇಳಲಾದ ಪೆನ್ನಡ್ರೈವ್ ಹಗರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ನೇರ ರೂವಾರಿಗಳಾಗಿದ್ದಾರೆ ಎಂದು ಕನಕಪುರ ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ನಾಗರಾಜು ಆರೋಪಿಸಿದ್ದಾರೆ.
ಕನಕಪುರ ನಗರದ ಸಿ.ಬಿ. ಸರ್ಕಲ್ ಬಳಿ ಜೆಡಿಎಸ್ ಹಾಗೂ ಬಿ.ಜೆ.ಪಿ ಕಾರ್‍ಯಕರ್ತರು ಪೆನ್ನಡ್ರೈವ್ ಬಿಡುಗಡೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿ ಮಾತನಾಡಿದರು.
ಎಸ್.ಐ.ಟಿ. ತನಿಖೆಯಲ್ಲಿ ನಮಗೆ ನಂಬಿಕೆ ಇಲ್ಲವಾಗಿದೆ ಡಿ.ಕೆ. ಶಿವಕುಮಾರ್ ಹೆಣ್ಣು ಮಕ್ಕಳ ನಗ್ನ ಚಿತ್ರವನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟು ಹೆಣ್ಣು ಮಕ್ಕಳ ಮಾನವನ್ನು ಹರಾಜಿಗಿಟ್ಟಿದೆ ಎಂದು ಖಂಡಿಸಿದ್ದಾರೆ.
ಜೆಡಿಎಸ್ ಮುಖಂಡ ಗೇರಹಳ್ಳಿ ರಾಜೇಶ್ ಮಾತನಾಡಿ ಡಿ.ಕೆ. ಶಿವಕುಮಾರ್ ಸಹೋದರ ಅಭಿವೃದ್ದಿಯೆಂದರೆ ಪೆನ್ನಡ್ರೈವ್ ಹಂಚುವುದು ಹಾಗೂ ರಾತ್ರಿ ೩ ಗಂಟೆಯವೇಳೆ ಗಿಫ್ಟ್ ಕಾರ್ಡ್‌ವಿತರಿಸುವುದೇ ಇವರ ರಾಜಕೀಯವಾಗಿದೆ ಎಂದು ಆರೋಪಿಸಿದ್ದಾರೆ.
ರಾiನಗರ ಗ್ರಾಮಾಂತರದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ ನಮಗೆ ತೆನೆಹೊತ್ತ ಮಹಿಳೆಯನ್ನು ಬಿಟ್ಟು ಪೆನ್ನಡ್ರೈವ್ ಇಟ್ಟುಕೊಳ್ಳೂವಂತೆ ಹೇಳುತ್ತಾರೆ. ನಮ್ಮ ತೆನೆಹೊತ್ತ ಮಹಿಳೆ ಹಾಗೆಯೇ ಇರುತ್ತದೆ ಕಾಂಗ್ರೆಸ್ ನವರು ತಮ್ಮ ಕೈಯಲ್ಲಿ ಪೆನ್ನಡ್ರೈವ್ ಇಟ್ಟುಕೊಳ್ಳುವಂತೆ ಕರೆನೀಡಿದ್ದಾರೆ.
ನಗರಸಭಾ ಸದಸ್ಯ ಸ್ಟುಡಿಯೋ ಚಂದ್ರು ಮಾತನಾಡಿ ಡಿ.ಕೆ. ಶಿವಕುಮಾರ್ ರವರು ಹಾಸನ ವ್ಯಾಪ್ತಿಯಲ್ಲಿ ಒಂದು ಲಕ್ಷ ಪೆನ್ನಡ್ರೈವ್ ಹಂಚಿದ್ದಾರೆ ಈ ರೀತಿ ಹಂಚಿಕೆಯಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ದೇವೆಗೌಡರ ಹೆಸರಿಗೆ ಮಸಿ ಬಳೆಯುವ ಕೆಲಸವನ್ನು ಮಾಡಲು ಹೋರಟಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಮಹಿಳಾ ಮುಖಂಡರಾದ ವರಲಕ್ಷ್ಮಿ ಮಾತನಾಡಿ ಡಿ.ಕೆ. ಶಿವಕುಮಾರ್‌ರವರೆ ಹೆಣ್ಣು ಮಕ್ಕಳ ಮಾನ ಹರಾಜು ಮಾಡಲು ಹೊರಟಿದ್ದೀರಿ ಅದೇ ಹಣ್ಣು ಮಕ್ಕಳು ತಿರಿಗಿ ಬಿದ್ದರೆ ನೀವು ಕುಳಿತುಕೊಳ್ಳೂವುದಕ್ಕೆ ಕುರ್ಚಿ ಇರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕೊತ್ತನೂರು ಕುಮಾರ್, ನಗರ ಘಟಕದ ಅದ್ಯಕ್ಷ ಮಂಜುನಾತ್, ಜೆಡಿಎಸ್ ಮಹಿಳಾ ಘಟಕದ ಅದ್ಯಕ್ಷೆ ಶೋಭಾ, ವರಲಕ್ಷ್ಮಿ ಮುಖಂಡರಾದ ನಲ್ಲಹಳ್ಳಿ ಶಿವಕುಮಾರ್ ಬೊಮ್ಮನಹಳ್ಳಿ ಕುಮಾರ್, ಡಿ.ಕೆ. ಭರತ್ ಕುಮಾರ್, ಮಾಜಿ ಜೆಡಿಎಸ್ ತಾಲೂಕು ಅದ್ಯಕ್ಷ ಜವನಾಮನದೊಡ್ಡಿ ಸಿದ್ದಮರೀಗೌಡ, ಕುರುಪೇಟೆ ಲೋಕೇಶ್, ಅರಳಾಳು ರಾಜೇಂದ್ರ, ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.