ಪೆಟ್ರೋಲ್ ದರ ಏರಿಕೆಗೆ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

ದಾವಣಗೆರೆ.ಜೂ.೭; ಕೊರೋನ ಎರಡನೇ ಅಲೆಯಲ್ಲಿ ತತ್ತರಿಸಿರುವ ನಾಗರೀಕರಿಗೆ ಪೆಟ್ರೋಲ್ ದರವನ್ನು 100 ರೂಪಾಯಿಗೆ ಏರಿಸುವ ಮೂಲಕ ದೇಶದ ಜನಕ್ಕೆ ಅತ್ಯುನ್ನತ ಕೊಡುಗೆ ನೀಡಿದ್ದಾರೆ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ವ್ಯಂಗ್ಯವಾಡಿದ್ದಾರೆ.ಪೆಟ್ರೋಲ್ ದರ ಏರಿಕೆ ವಿರುದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸೈಯದ್ ಇರ್ಫಾನ್ ಇವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ದೇಶದ ಜನರು ಕೊರೊನ ಮೊದಲನೇ ಹಾಗೂ ಎರಡನೇ ಅಲೆಗೆ ತತ್ತರಿಸಿ ಹೋಗಿದ್ದು ಕೇಂದ್ರ ಸರ್ಕಾರವು ಜನರಿಗೆ ಬರೆ ಮೇಲೆ ಬರೆ ಎಳೆಯುತ್ತಿದ್ದು ಒಂದು ಕಡೆ ಪ್ಯಾಕೇಜ್ಗಳ ಮೇಲೆ ಪ್ಯಾಕೇಜ್ ಘೋಷಣೆ ಮಾಡುತ್ತಿದ್ದು ಅದು ಇನ್ನುವರೆಗೂ ಯಾರಿಗೂ ತಲುಪದಿರುವುದು ಸತ್ಯ ಸಂಗತಿಯಾಗಿದೆ ಇದರೊಂದಿಗೆ ಪೆಟ್ರೋಲ್ ಹಾಗೂ ದಿನಬಳಕೆಯ ವಸ್ತುಗಳ ಬೆಲೆಯನ್ನು ಏರಿಸಲಾಗಿದ್ದು ಮೊದಲೇ ಸಂಕಷ್ಟದಲ್ಲಿರುವ ಜನಗಳಿಗೆ ದಿಕ್ಕೇ ತೋಚದಂತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ರೈತ ಪರ ಸರ್ಕಾರ ಎಂದು ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಗೊಬ್ಬರದ ಬೆಳೆಯನ್ನು ಸಹ ಏರಿಕೆ ಮಾಡಿದ್ದು ಈಗ ಕೇಂದ್ರ ಸರ್ಕಾರ ಡೀಸೆಲ್ ಹಾಗೂ ಪೆಟ್ರೋಲ್ ಬೆಲೆಯನ್ನು ಏರಿಸಿದ್ದು ಖಂಡನಾರ್ಹವಾಗಿದೆ ಇದಕ್ಕೆ ಬಿಜೆಪಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಕಿಸಾನ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಜಿಕ್ರಿಯಾ ಅಸಮಾಧಾನವನ್ನು ವ್ಯಕ್ತಪಡಿಸಿದರು.ನಗರದ ಬೂದಾಳ್ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ಸೈಯದ್ ಖಾಲಿದ್ ಅಹ್ಮದ್ ರವರು ಕ್ರಿಕೆಟ್ ನಲ್ಲಿ ಶತಕ ಬಾರಿಸಿದಾಗ ಬ್ಯಾಟ್ ಎತ್ತುವ ರೀತಿಯಲ್ಲಿ ಬಂಕ್ ನಲ್ಲಿ ಬ್ಯಾಟ್ ಎತ್ತಿ ವಿನೂತನವಾಗಿ ಪ್ರತಿಭಟಿಸಿದರು. ಈ ಸಂಧರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಸಾಗರ್.ಎಲ್.ಎಂ.ಹೆಚ್,ಕಿಸಾನ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಜಿಕ್ರಿಯಾ,ಅಲ್ಪಸಂಖ್ಯಾತ ಕಾಂಗ್ರೆಸ್ ಮುಖಂಡ ರಿಯಾಜುದ್ದೀನ್,ಯುವ ಮುಖಾಂಡರುಗಳಾದ ವಾಜಿದ್,ಮಹಬೂಬ್ ಬಾಷಾ,ಫಜ್ಲೂರ್ ರಹಮಾನ್ ಮುಬಾರಕ್, ರಾಜಿಕ್, ನದೀಮ್ ಇತರರು ಭಾಗವಹಿಸಿದ್ದರು.