ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ರಾಯಚೂರು, ಜೂ.೧೧- ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ರಾಯಚೂರು ಗ್ರಾಮಾಂತರದ ಗಿಲೇಸುಗೂರ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ತಾಲೂಕಿನ ಗಿಲೇಸುಗೂರ ಪೆಟ್ರೋಲ್ ಬಂಕ್ ಸಮೀಪ ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯಲ್ಲಿ ಗಿಲೇಸುಗೂರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ, ಸಯ್ಯದ್ ಬುರಾನ್, ಕಾಂಗ್ರೆಸ್‌ನ ಹಿರಿಯ ಮುಖಂಡ ಬಾಷುವಲಿ, ಹಮೀದ್ ಸಾಬ್, ಯುವ ಕಾಂಗ್ರೆಸ್ ನ ನಿಸಾರ್, ಶ್ರಿವು, ಸಲಿಮ್, ಪಿರ್ ಪಾಶಾ, ಇಮ್ರಾನ್, ಪಯಜ್, ಅಜದ್, ನಿಕಿಲ್, ಲಿಂಗಪ್ಪ, ಸೇರಿದಂತೆ ಇತರರು ಉಪಸ್ಥಿತರಿದ್ದರು.