ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಮೈಸೂರು, ಜೂ.10: ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮಾಜಿ ಶಾಸಕ ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ವಿಶೇಷ ಪ್ರತಿಭಟನೆ ನಡೆಸಿದರು.
ನಗರದ ಹಾರ್ಡಿಂಗ್ ವೃತ್ತದ ಬಳಿ ಸೈಕಲ್‍ನಲ್ಲಿ ಸವಾರಿ ಆರಂಭಿಸಿ ಪ್ರತಿಭಟನೆ ನಡೆಸಿದ ಅವರು ಬೆಲೆ ಏರಿಕೆ ಮಾಡಿ ಪ್ಯಾಕೇಜ್ ಲಕೇಜ್ ಅಂತ ಘೋಷಣೆ ಮಾಡುತ್ತಾರೆ. ಬೆಲೆ ಏರಿಕೆಯಿಂದ ದೇಶದ ಜನರ ಬೆನ್ನು ಮೂಳೆ ಮುರಿದಿದೆ. ಕೇಂದ್ರದ ನೀತಿ ವಿರೋಧಿಸಿ ಜನ ಹೋರಾಟ ಮಾಡಬೇಕು.
ಜೈಲಿಗೆ ಹೋಗಬೇಕು. ಜನಸಾಮಾನ್ಯರಿಗೆ ಬಾರಿ ತೊಂದರೆ ಆಗುತ್ತಿದೆ, ಇದು ಒಳ್ಳೆಯದಲ್ಲ. ಎಂಪಿ.ಎಂಎಲ್‍ಎ ಗಳು ಏನು ಮಾಡುತ್ತಿದ್ದಾರೆ.? ನಿಮಗೆ ಜವಾಬ್ದಾರಿ ಗೌರವ ಇದ್ದರೆ ಪ್ರಧಾನಿ ವಿರುದ್ಧ ನಿಂತು ಒತ್ತಾಯ ಮಾಡಬೇಕು. ಇಲ್ಲ ಅಂದರೆ ಪಾರ್ಲಿಮೆಂಟ್ ಸದಸ್ಯರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಒತ್ತಾಯಿಸಿದರು.
ಮೈಸೂರು ನಗರದಲ್ಲಿ ಭೂ ಹಗರಣ ಪ್ರಕರಣಕ್ಕೆ ಉನ್ನತ ಮಟ್ಟದ ಸಿಬಿಐ ತನಿಖೆಗೆ ಒತ್ತಾಯಿಸಿದರು. ಮೈಸೂರು ನಗರದಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ನಡೆದಿದೆ. ಮೈಸೂರಿನಲ್ಲಿ ಇದು ಸಾಮಾನ್ಯ ದಂದೆಯಾಗಿದೆ. ಭೂಮಿಯ ಲೂಟಿ ಆಗಿದೆ. ರೋಹಿಣಿ ಸಿಂಧೂರಿಯವರ ವರ್ಗಾವಣೆಗೆ ಭೂ ಮಾಫಿಯಾದವರೇಕಾರಣ ಎಂದು ಆರೋಪಿಸಿದರು.
ರೋಹಿಣಿ ಇದ್ದರೆ ಬಹಳ ಜನರ ಹೆಸರು ಬಹಿರಂಗ ವಾಗುತ್ತೆ ಅಂತ ದೊಡ್ಡ ಪಿತೂರಿ ನಡೆಸಿ ವರ್ಗಾವಣೆ ಮಾಡಿಸಿದ್ದಾರೆ. ಸುಮಾರು 25 ವರ್ಷ ದಿಂದ ನಡೆದಿರುವ ಭೂ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು.
ಯಾರು ತಪ್ಪಿತಸ್ಥರು ಇದ್ದರೋ ಅವರನ್ನು ಜೈಲಿಗೆ ಕಳುಹಿಸಬೇಕು. ವಿಜಯ ಭಾಸ್ಕರ್ ಒಂದು ವರದಿ ನೀಡಿದ್ದಾರೆ. ಆ ವರದಿ ಏನಾಯಿತು, ಯಾವ ಮೂಲೆಗೆ ಹಾಕಿದ್ದೀರಿ, ಸರ್ಕಾರ ವರದಿಯನ್ನು ಬಹಿರಂಗ ಮಾಡಬೇಕು.
ಈ ಬಗ್ಗೆ ಸಿಬಿಐ ತನಿಖೆಗೆ ತೀವ್ರ ಒತ್ತಾಯ ಮಾಡುತ್ತೇನೆ. ಈ ಬಗ್ಗೆ ಉನ್ನತ ಮಟ್ಟದ ಸಿಬಿಐ ಸಮಗ್ರ ತನಿಖೆ ಯಾಗಬೇಕು ಎಂದು ಒತ್ತಾಯಿಸಿದರು.