ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

ನವದೆಹಲಿ, ಮಾ.೨೫- ದೇಶದಲ್ಲಿ ಪಂಚರಾಜ್ಯಗಳ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಮುಖವಾಗಿದೆ.
ದೇಶದಲ್ಲಿ ಸತತ ಏರಿಕೆ ಕಾಣುತ್ತಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ವರ್ಷದಲ್ಲಿ ಮೊದಲ ಬಾರಿಗೆ ನಿನ್ನೆ ತುಸು ಇಳಿಮುಖವಾಗಿತ್ತು. ಇಂದು ಮತ್ತೊಮ್ಮೆ ಇಳಿಕೆಯಾಗಿದೆ. ಸರಾಸರಿ ಪೆಟ್ರೋಲ್ ೨೧ ಪೈಸೆ ಮತ್ತು ಡೀಸೆಲ್ ೨೦ ಪೈಸೆ ಇಳಿಕೆಯಾಗಿದೆ.
ರಾಷ್ಟ್ರರಾಜಧಾನಿಯಲ್ಲಿ ಸತತ ಎರಡನೇ ದಿನ ಇಳಿಮುಖವಾಗಿದೆ.ಇದೀಗ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ೯೦.೭೮ ರೂಪಾಯಿಗೆ ಇಳಿಕೆಯಾಗಿದೆ.
೨೦೨೦ರ ಮಾರ್ಚ್ ೧೬ರ ಬಳಿಕ ದೇಶದಲ್ಲಿ ಮೊದಲ ಬಾರಿಗೆ ನಿನ್ನೆ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಇಳಿಕೆಯಾಗಿತ್ತು.ಇದೀಗ ಮತ್ತು ಇಳಿಕೆಯಾಗಿರುವುದು ವಾಹನ ಸವಾರರಲ್ಲಿ ತುಸು ನಿರಾಳ ಬಾವ ತರಿಸಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾದ ಹಿನ್ನೆಲೆಯಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಕ್ರಮವಾಗಿ ೨೦ ಹಾಗು ೨೧ ಪೈಸೆ ಇಳಿಕೆಯಾಗಿದೆ.
ದೇಶದ ಎಲ್ಲಾ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸರಾಸರಿ ೧೮ರಿಂದ ೨೧ ಪೈಸೆ ಪೆಟ್ರೋಲ್ ಮತ್ತು ೨೦ ರಿಂದ ೨೨ ಪೈಸೆ ಡೀಸೆಲ್ ಬೆಲೆ ಇಳಿಕೆಯಾಗಿದೆ.