ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ

ನವೆದಹಲಿ, ಮೇ ೨೧-ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲ್-ಡೀಸೆಲ್ ದರ ದುಬಾರಿಯಾಗುತ್ತಿದೆ. ಇಂದು ಪ್ರತಿ ಲೀಟರ್ ಪೆಟ್ರೂಲ್ ೧೫ ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ದರ ೩೧ ಪೈಸೆಯಷ್ಟು ತೈಲ ಕಂಪನಿಗಳು ಹೆಚ್ಚಿಸಿವೆ.
ಬೆಂಗೂರಿನಲ್ಲಿ ಪೆಟ್ರೂಲ್ ೯೬.೧೪ ಡೀಸೆಲ್ ೮೮.೪೪, ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ೯೯.೩೨,ಡೀಸೆಲ್ ೯೧.೧೦,ಚೆನ್ನೈ ಪೆಟ್ರೋಲ್ ೯೪.೭೧ ಡೀಸೆಲ್ ೮೬.೮೨, ಕೊಲ್ಕತ್ತ, ೯೩.೧೧, ಡೀಸೆಲ್ ೮೬.೪೪ ಅದೇ ರೀತಿ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ೯೩.೦೪ ಡೀಸೆಲ್ ೮೩.೮೦, ಭೋಪಾಲ್‌ನಲ್ಲಿ ಪೆಟ್ರೋಲ್ ೧೦೧.೧೧ ಪೈಸೆಯಷ್ಟಿದೆ.
ಮೇ ತಿಂಗಳಿನಲ್ಲಿ ಒಟ್ಟು ೧೧ ಬಾರಿ ಇಂಧನ ದರಗಳನ್ನು ಏರಿಕೆ ಮಾಡಲಾಗಿದೆ.ಪ್ರತಿ ಲೀಟರ್‌ಗೆ ೨.೬೪ ಹಾಗೂ ಪ್ರತಿ ಲೀಟರ್ ಡೀಸೆಲ್ ೩.೦೭ ರೂ ಹೆಚ್ಚಳ ಮಾಡಲಾಗಿದೆ.
ಕೊರೊನಾ ಸೋಂಕು ತಡೆಗೆ ಬಹುತೇಕ ರಾಜ್ಯಗಳಲ್ಲಿ ಲಾಕ್‌ಡೌನ್ ಮಾಡಲಾಗಿದೆ.
ಉದ್ಯೋಗವಿಲ್ಲದೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇಂಧನ ದರ ಏರಿಕೆ ನಿಯಂತ್ರಿಸಲು ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ದಿನದಿಂದ ದಿನಕ್ಕೆ ಇಂಧನ ದರ ದುಬಾರಿಯಾಗುತ್ತಿದೆ.ಈ ಬಗ್ಗೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು ದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿವೆ.