ಪೆಟ್ರೋಲ್-ಡೀಸೆಲ್ ದರ ತುಸು ಹೆಚ್ಚಳ


ನವದೆಹಲಿ, ಏ.೩೦- ರಾಜ್ಯ ರಾಜಧಾನಿ ಬೆಂಗಳೂರು ಒಳಗೊಂಡಂತೆ ವಿವಿಧ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಇಂದು ಕೊಂಚ ಏರಿಕೆ ಆಗಿದೆ ಎಂದು ವರದಿಯಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿದಿನ ಏರಿಳಿತಗಳು ಉಂಟಾಗುತ್ತಲೇ ಇರುತ್ತವೆ. ಇಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಬೆಂಗಳೂರಿನಲ್ಲಿ ೯೩.೫೧ ರೂ, ಹೈದರಾಬಾದ್‌ನಲ್ಲಿ ೯೩.೯೯ ರೂ, ತಿರುವನಂತಪುರದಲ್ಲಿ ೯೨.೪೧ ರೂ, ಚೆನ್ನೈನಲ್ಲಿ ೯೨.೪೩ ರೂ. ಇದೆ. ಭಾರತದ ಕೆಲವು ನಗರಗಳಲ್ಲಿ ಡೀಸೆಲ್ ಬೆಲೆ ಏರಿಕೆಯಾಗಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲೂ
ಇಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ ೯೦.೪೦ ರೂ. ಮುಂಬೈನಲ್ಲಿ ೯೬.೮೩ ರೂ, ಜೈಪುರದಲ್ಲಿ ೯೬.೪೮ ರೂ, ಬೆಂಗಳೂರಿನಲ್ಲಿ ೯೩.೫೧ ರೂ, ಹೈದರಾಬಾದ್‌ನಲ್ಲಿ ೯೩.೯೯ ರೂ, ತಿರುವನಂತಪುರದಲ್ಲಿ ೯೨.೪೧ ರೂ, ಚೆನ್ನೈನಲ್ಲಿ ೯೨.೪೩ ರೂ, ಕೊಲ್ಕತ್ತಾದಲ್ಲಿ ೯೦.೬೨ ರೂ. ಇದೆ.
ಇನ್ನು, ಕೆಲ ನಗರಗಳಲ್ಲಿ ಡೀಸೆಲ್ ಬೆಲೆ ಕೊಂಚ ಏರಿಕೆಯಾಗಿದೆ. ಬೆಂಗಳೂರು, ಮುಂಬೈ, ಹೈದರಾಬಾದ್, ಭುವನೇಶ್ವರ, ತಿರುವನಂತಪುರ, ಪಾಟ್ನಾದಲ್ಲಿ ೧ ಲೀಟರ್ ಡೀಸೆಲ್ ಬೆಲೆ ೮೭ ರೂ. ಆಗಿದೆ. ವಿವಿಧ ನಗರಗಳಲ್ಲಿ ಇಂದಿನ ಡೀಸೆಲ್ ಬೆಲೆ ಹೀಗಿದೆ. ನವದೆಹಲಿಯಲ್ಲಿ ಇಂದು ೧ ಲೀಟರ್ ಡೀಸೆಲ್‌ಗೆ ೮೦.೭೩ ರೂ. ಇದೆ. ಚೆನ್ನೈನಲ್ಲಿ ೮೫.೭೫ ರೂ, ಮುಂಬೈನಲ್ಲಿ ೮೭.೮೧ ರೂ, ಬೆಂಗಳೂರಿನಲ್ಲಿ ೮೫.೬೭ ರೂ, ಹೈದರಾಬಾದ್‌ನಲ್ಲಿ ೮೮.೦೫ ರೂ. ಇದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ಸಾಮಾನ್ಯ ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಇಳಿಕೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸಲಾಗುತ್ತಿದೆ.