ಪೆಟ್ರೋಲ್ ಡೀಸೆಲ್ ದರ ತುಸು ಏರಿಕೆ

ನವದೆಹಲಿ , ಮೇ ೫- ಪೆಟ್ರೋಲ್ ಮತ್ತು ಡೀಸೆಲ್ ದರ ಸತತ ಎರಡನೇ ದಿನ ಎಲ್ಲಾ ಮಹಾನಗರಗಳಲ್ಲಿ ಏರಿಕೆಯಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ ೧೯ ಪೈಸೆ ಏರಿಕೆಯಾದರೆ ಡೀಸೆಲ್ ಬೆಲೆ ಲೀಟರ್ ಗೆ ೨೧ ಪೈಸೆಯಷ್ಟು ಏರಿಕೆಯಾಗಿದೆ.

ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಇಂದು ಲೀಟರ್ ಗೆ ೯೦ ರೂಪಾಯಿ ೭೪ ಪೈಸೆಯಷ್ಟಿದ್ದರೆ, ಡೀಸೆಲ್ ದರ ೮೧ ರೂಪಾಯಿ ೧೨ ಪೈಸೆಯಾಗಿದೆ. ಮುಂಬೈಯಲ್ಲಿ ಪೆಟ್ರೋಲ್ ದರ ಇಂದು ಲೀಟರ್ ಗೆ ೯೭ ರೂಪಾಯಿ ೧೨ ಪೈಸೆಯಾಗಿದ್ದರೆ ಡೀಸೆಲ್ ಬೆಲೆ ಲೀಟರ್ ಗೆ ೮೮ ರೂಪಾಯಿ ೧೯ ಪೈಸೆಯಷ್ಟಾಗಿದೆ.

ತೈಲ ಮಾರುಕಟ್ಟೆ ಕಂಪೆನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪರಿಷ್ಕರಿಸುತ್ತಿವೆ. ಹಲವು ದಿನಗಳ ನಂತರ ಪೆಟ್ರೋಲ್ ಡೀಸೆಲ್ ದರ ಮತ್ತೆ ಏರಿಕೆಯಾಗಿದೆ.