ಪೆಟ್ರೋಲ್, ಡೀಸೆಲ್ ದರ ತುಸು ಇಳಿಕೆ

ನವದೆಹಲಿ, ಮಾ. ೨೪- ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್, ಡೀಸೆಲ್ ದರ ತುಸು ಇಳಿಕೆಯಾಗಿದೆ.
ಪ್ರತಿ ಲೀಟರ್ ಪೆಟ್ರೋಲ್ ದರ ೧೮ ಪೈಸೆ ಹಾಗೂ ಡೀಸೆಲ್ ದರ ೧೭ ಪೈಸೆ ಕಡಿಮೆಯಾಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾಗಿರುವುದರಿಂದ ಕೊಂಚ ಇಳಿಕೆಯಾಗಿದೆ. ದೆಹಲಿಯಲ್ಲಿ ಈ ಮೊದಲು ಪೆಟ್ರೋಲ್ ದರ ೯೧.೧೭ ಪೈಸೆ ಇತ್ತು. ಇಂದು ೯೦.೯೯ ರೂಗೆ ಇಳಿಕೆಯಾಗಿದೆ. ಅದೇ ರೀತಿ ಪ್ರತಿ ಲೀಟರ್ ದರ ೮೧.೪೭ ಪೈಸೆಯಷ್ಟು ಇತ್ತು. ಈಗ ೮೧.೩೩ ಪೈಸೆಯಷ್ಟಿದೆ.
ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಇಂಧನ ದರ ಇಳಿಕೆಯಾಗಿರುವುದು ವಾಹನ ಸವಾರರಿಗೆ ಕೊಂಚ ನೆಮ್ಮದಿ ತಂದಿದೆ. ಈ ಹಿಂದೆ ಮಾರ್ಚ್ ೧೬, ೨೦೨೦ರಲ್ಲಿ ಇಂಧನ ದರ ಇಳಿಕೆಯಾಗಿತ್ತು. ರಾಜಸ್ತಾನ, ಮಧ್ಯಪ್ರದೇಶ, ಹಾಗೂ ಮಹಾರಾಷ್ಟ್ರದಲ್ಲಿ ಪೆಟ್ರೋಲ್ ದರ ೧೦೦ ರೂ. ಗಡಿ ದಾಟಿತ್ತು. ದರ ಪರಿಷ್ಕರಣೆಯಿಂದಾಗಿ ವಾಣಿಜ್ಯ ರಾಜಧಾನಿ, ಮುಂಬೈನಲ್ಲಿ ಪೆಟ್ರೋಲ್ ೯೭.೪೦ ಹಾಗೂ ಡೀಸೆಲ್ ದರ ೮೮.೪೨ ರಷ್ಟು ಇದೆ.
ಮುಂಬರುವ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯಾಗುವ ಭರವಸೆಯಿದೆ.