ಪೆಟ್ರೋಲ್-ಡೀಸೆಲ್ ದರ ತುಸು ಇಳಿಕೆ

ನವದೆಹಲಿ,ಮಾ.೩೦- ಪೆಟ್ರೋಲ್-ಡೀಸೆಲ್ ದರ ತುಸು ಇಳಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ದರ ೧೯ ಪೈಸೆ ಹಾಗೂ ಡೀಸೆಲ್ ದರ ೨೧ ಪೈಸೆಯಿಂದ ೨೩ ಪೈಸೆಯಷ್ಟು ಇಳಿಕೆ ಕಂಡಿದೆ. ಇದರಿಂದಾಗಿ ವಾಹನ ಸವಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ದೇಶಾದ್ಯಂತ ಪೆಟ್ರೋಲ್ ಇಳಿಕೆ ದರ ಅನ್ವಯವಾಗಿದ್ದು, ಆಯಾ ರಾಜ್ಯಗಳ ತೆರಿಗೆ ವಿಧಿಸುವ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ದರ ವ್ಯತ್ಯಾಸವಿರುತ್ತದೆ.
ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ೯೦.೫೬, ಕೊಲ್ಕತ್ತದಲ್ಲಿ ೯೦.೭೭, ಮುಂಬೈನಲ್ಲಿ ೯೬.೯೮, ಚೆನ್ನೈನಲ್ಲಿ ೯೨.೫೮, ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ೯೩.೫೯ ಪೈಸೆಯಷ್ಟಿದೆ.
ಅದೇ ರೀತಿ ಪ್ರತಿ ಲೀಟರ್ ಡೀಸೆಲ್ ದರ ೮೦.೮೭, ಕೊಲ್ಕತದಲ್ಲಿ ೮೩.೭೫, ಮುಂಬೈನಲ್ಲಿ ೮೭.೯೬, ಚೆನ್ನೈನಲ್ಲಿ ೮೫.೮೮, ಬೆಂಗಳೂರಿನಲ್ಲಿ ೮೫.೭೫ ಪೈಸೆಯಷ್ಟಿದೆ.
ಫೆ. ೨೭ರ ನಂತರ ಇಂಧನ ದರ ಪರಿಷ್ಕರಣೆ ಮಾಡಿರಲಿಲ್ಲ. ಬಳಿಕ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದರ ಕಡಿಮೆ ಮಾಡಿ ಪರಿಷ್ಕೃತ ದರ ಪ್ರಕಟಿಸಿದ್ದರು. ಕಳೆದ ೪ ದಿನಗಳಿಂದ ಇಂಧನ ದರ ಸ್ಥಿರತೆಯಲ್ಲಿತ್ತು.
ಪಂಚರಾಜ್ಯಗಳಿಗೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಹಿಂದೆ ಮೂರು ವಾರಗಳ ಕಾಲ ಇಂಧನ ದರ ಏರಿಕೆಯನ್ನು ತಡೆ ಹಿಡಿಯಲಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಏರುಪೇರಾದರೂ ತೈಲ ಕಂಪನಿಗಳು ಇಂಧನ ದರ ಹೆಚ್ಚಿಸಿರಲಿಲ್ಲ.