ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಬಿಎಸ್ಪಿ ಮನವಿ

ರಾಯಚೂರು, ಜೂ.೧೦- ಪೆಟ್ರೋಲ್ , ಡಿಸೆಲ್ ದರ ಏರಿಕೆಯನ್ನು ಖಂಡಿಸಿ ಬಹುಜನ ಸಮಾಜವಾದಿ ಪಕ್ಷ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ಪೆಟ್ರೋಲ್, ಡಿಸೆಲ್ ಬೆಲೆ ಏರಿಕೆ ಮಾಡುತ್ತಿದೆ. ಇವರೆಡರ ಮೇಲೆ ಶೆ ೩೦೦ ರಷ್ಟು ತೆರಿಗೆ ವಿಧಿಸುತ್ತಿದ್ದು ಈಗ ಪೆಟ್ರೋಲ್ ದರ ಲೀಟರ್ ಗೆ ನೂರು ರೂಪಾಯಿ ಯಾಗಿ ಜನಸಾಮಾನ್ಯರಿಗೆ ಹೊರೆಯಾಗಿದೆ ಎಂದು ದೂರಿದರು.
ಹೆಚ್ಚಿನ ತೆರಿಗೆ ವಿಧಿಸಿ ಶೋಷಣೆ ಮಾಡುತ್ತುದೆ.ಕೋವಿಡ್ ನಿರ್ಮೂಲನೆ ಯಲ್ಲಿ ಸರ್ಕಾರ ವಿಫಲವಾಗಿದೆ. ಆಕ್ಸಿಜನ್, ವೆಂಟಿಲೆಟರ್, ಔಷಧಿಗಳನ್ನುಸರಿಯಾದ ಸಮಯಕ್ಕೆ ನೀಡದ ಪರಿಣಾಮಅನೇಕ ಜನರ ಸಾವಿಗೆ ಕಾರಣವಾಗಿದೆ. ಸರ್ಕಾರದ ಲಾಕ್ ಡೌನ್ ನಿಂದ ಅನೇಕರು ಉದ್ಯೋಗ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ಅಲ್ಲದೇ ಗ್ಯಾಸ್ ಸುಲಿಂಡರ್, ವಿದ್ಯುತ್ ದರ, ದಿನಬಳಕೆಯ ವಸ್ತುಗಳ ಬೆಲೆ ಏರಿಕೆ, ಅಡುಗೆ ಎಣ್ಣೆ ಏರಿಕೆ ಜನದಾಮಾನ್ಯರನ್ನು ಮತ್ತಷ್ಟು ಸಂಕಷ್ಟೆ ದೂಡಿದೆಕೂಡಲೇ ದರ ಏರಿಕೆಯನ್ನು ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.