ಪೆಟ್ರೋಲ್-ಡಿಸೇಲ್ ಹಾಕಿಸಲು ಲೋನ್ ನೀಡಲು ಮನವಿ

ದಾವಣಗೆರೆ. ಜೂ.೮;  ಪೆಟ್ರೋಲ್ ಹಾಗೂ ಡೀಸೆಲ್  ಗಗನಕ್ಕೇರಿದ್ದು ವಾಹನಗಳಿಗೆ ಹಾಕಿಸಲು ಲೋನ್ ನೀಡಬೇಕೆಂದು ಒತ್ತಾಯಿಸಿ ಭಾರತೀಯ ಯುವ ಕಾಂಗ್ರೆಸ್ ಸದಸ್ಯರು ದಾವಣಗೆರೆಯ ಮಂಡಿಪೇಟೆಯಲ್ಲಿರುವ ಕೆನರಾ ಬ್ಯಾಂಕ್ ಮ್ಯಾನೇಜರ್ ಗೆ ಮನವಿ ಸಲ್ಲಿಸಿದ್ದಾರೆ.ದೇಶಾದ್ಯಂತ ಲಾಕ್ಡೌನ್ ಪರಿಸ್ಥಿತಿಯಲ್ಲಿ ಅಂಗಡಿ-ಮುಂಗಟ್ಟುಗಳು ಎಲ್ಲಾ ಬಂದಾಗಿದೆ. ಪೆಟ್ರೋಲ್ ದರ ಗಗನಕ್ಕೇರಿದೆ, ಪ್ರತಿ ದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಆಗುತ್ತಿದೆ. ಆದ್ದರಿಂದ ರಾಷ್ಟ್ರೀಯ ಬ್ಯಾಂಕುಗಳಲ್ಲಿ ಈ ಕೂಡಲೇ ಪೆಟ್ರೋಲ್ ಹಾಗೂ ಡೀಸೆಲ್ ಖರೀದಿಗೆ ಲೋನ್ ಅಪ್ಲಿಕೇಶನ್ ಒದಗಿಸಬೇಕೆಂದು ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್  ಒತ್ತಾಯಿಸಿದೆ. 40 ಸಾವಿರದಿಂದ 50 ಸಾವಿರ ರೂ ದ್ವಿಚಕ್ರ ವಾಹನ ಖರೀದಿಗೆ ಲೋನು ಒದಗಿಸುತ್ತಾರೆ ಆದರೆ ಅದಕ್ಕೆ ಬೇಕಾಗಿರುವ ಪೆಟ್ರೋಲ್-ಡೀಸೆಲ್,ಪ್ರತಿದಿನ ನೂರು ರೂ ನಂತೆ  ತಿಂಗಳಿಗೆ ಮೂರು ಸಾವಿರ ರೂ, ವರ್ಷದ 365 ದಿನಕ್ಕೆ 36500 ಖರ್ಚಾಗುತ್ತೆ, ಒಬ್ಬ ಸಾಮಾನ್ಯ ವ್ಯಕ್ತಿಗೆ ವರ್ಷಕ್ಕೆ.60000 ರೂ ಪೆಟ್ರೋಲ್ ಬೇಕಾಗಿದೆ ಹಾಗಾಗಿ ಈ ಕೂಡಲೇ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು   ರಾಷ್ಟ್ರೀಯ ಬ್ಯಾಂಕುಗಳಿಗೆ ಪೆಟ್ರೋಲ್ ಡೀಸೆಲ್ ಖರೀದಿಗೆ ಲೋನ್  ಅಪ್ಲಿಕೇಶನ್ ಬೇಕೆಂದು ಒತ್ತಾಯಿಸಿದರು. ನಗರದ ಎಸ್ ಬಿಐ ಬ್ಯಾಂಕ್, ಕೆನರಾ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಜನರಲ್ ಮ್ಯಾನೇಜರ್ ಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.ಈ ಒಂದು ಮನವಿಯನ್ನು ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ಸಿನ ರಾಷ್ಟ್ರೀಯ ವಕ್ತಾರರಾದ ಮೈನುದ್ದೀನ್ ಹೆಚ್ ಜೆ, ಮೊಹಮ್ಮದ್ ಸಾಧಿಕ್, ಸದ್ದಾಂ,ಮಹಮ್ಮದ್ ವಾಜಿದ್,  ಮಹಮ್ಮದ್ ರಫೀಕ್,  ರಾಕೇಶ್,  ಫಾರೂಕ್ ಶೇಕ್ ಇದ್ದರು.