ಪೆಟ್ರೋಲ್,ಡೀಸೆಲ್, ಬೆಲೆ ಇಳಿಕೆ ಮಾಡಲು ಆಗ್ರಹ

ರಾಯಚೂರು, ಜೂ.೯- ಜನ ಸಾಮಾನ್ಯರ ಮೇಲೆ ಹೊರೆಯಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆದರ ಇಳಿಕೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ಜನತಾ ವೇದಿಕೆ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ರಾಜ್ಯದಲ್ಲಿ ಮೇ ೪ ರಿಂದ ಇಲ್ಲಿಯತನಕ ಒಟ್ಟಾರೆ ೨೧ ನೇ ಬಾರಿಗೆ ಬೆಲೆ ಏರಿಕೆ ಮಾಡಲಾಗಿದೆ. ಒಂದು ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆದರ ಏರಿಕೆ ಕಾಣುತ್ತಾ ಇದ್ದು, ಜನ ಸಾಮಾನ್ಯರ ಜೇಬು ಸುಡುತ್ತಿದೆ. ಕರ್ನಾಟಕ ರಾಜ್ಯ ಸೇರಿ ಹಲವು ರಾಜ್ಯಗಳಿಗೆ ಲೀಟರ್ ಪೆಟ್ರೋಲ್ ೧೦೦ ರೂಪಾಯಿ ದಾಟಿದೆ. ಕೊರೊನ ಮತ್ತು ಲಾಕ್ ಡೌನ್ ಮದ್ಯ ಈ ರೀತಿಯ ಇಂಧನ ದರ ಏರಿಕೆ ಮಾಡಿದ್ದೂ ನಿಜಕ್ಕೂ ಜನರನ್ನು ತಲ್ಲಣಗೊಳಿಸಿದೆ ಎಂದು ದೂರಿದರು.
ಒಂದು ತಿಂಗಳಲ್ಲಿ ಪೆಟ್ರೋಲ್ ೫ ರೂಪಾಯಿ ಡಿಸೈಲ್ ೬ ರೂಪಾಯಿ ಏರಿಕೆಯಾಗಿದೆ . ೨೦೨೦ ರಲ್ಲಿ ಆರಂಭವಾದ ಕೊರೊನ ವೈರಸ್ ದಿಂದ ಹಂತ ಹಂತವಾಗಿ ಲಾಕ್ ಡೌನ್ ನಿರ್ಮಾಣವಾಯಿತು, ಆದರೆ ಕೇಂದ್ರ ಮತ್ತು ರಾಜ್ಯ ಸರಕಾರ ಇಂಧನ ಬೆಲೆ ಜಾಸ್ತಿ ಏರಿಕೆ ಮಾಡುತ ಇದೆ. ಈಗಿನ ಮಾಹಿತಿ ಪ್ರಕಾರ ಪೆಟ್ರೋಲ್ ಮೂಲ ದರ ೩೭ ಇರುತ್ತದೆ. ಎಲ್ಫ್ ಸುಂಕ ೩೩ ವ್ಯಾಟ್ ೨೪.೫ ವಿತರಕರ ಕಮಿಷನ್ ೩.೬ ಅಗಿರುತ್ತದೆ. ಪೆಟ್ರೋಲ್ ದರಕ್ಕಿಂತ ಸರಕಾರ ವಿಧಿಸುವ ತೆರಿಗೆ ೬೦ ರೂಪಾಯಿ ಆಗಿದೆ. ರಾಜ್ಯದಲ್ಲಿ ಕೂರೊನ ಸೋಂಕಿನ ಹೊಡೆತಕ್ಕೆ ಸಿಲುಕಿರುವ ಜನಸಾಮಾನ್ಯರು ಬದುಕು ಬಹಳ ಕಷ್ಟಕರವಾಗಿದೆ. ತಮ್ಮ ಜೀವನ ನಿರ್ವಹಿಸಲಾಗದೆ ಇರುವ ಅಸಹಾಯಕ ಪರಿಸ್ಥಿತಿಯಲ್ಲಿ ಸರಕಾರ ಇಂಧನ ಬೆಲೆ ಏರಿಕೆ ಮಾಡಿದ್ದೂ ಮತ್ತೊಂದು ಕಾರಣವಾಗಿದೆ. ಕೇಂದ್ರ ಸರಕಾರ ಸಾಮಾನ್ಯ ಜನರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಕುಡಿಯುವ ನೀರು ವಿದ್ಯುತ್ ಇಂಧನ ಬೆಲೆ ಆರೋಗ್ಯ ಎಲ್ಲವು ದುಬಾರಿಯಾದರೆ , ಜನರು ಜೀವನ ನಿರ್ವಹಣೆ ಮಾಡಲು ಹೇಗೆ ಸಾಧ್ಯ. ಕೃಷಿಯನ್ನು ನಂಬಿಕೊಂಡ ರೈತರು ಟ್ಯಾಕ್ಟರ್ ಕೃಷಿ ಉಪಕರಣಗಳ ಬಳಕೆ ಸಾರಿಗೆ ವಾಹನ ಸಾಗಾಣಿಕ ದರದಲ್ಲಿ ಹೆಚ್ಚಳವಾಗುವುದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ.ಈ ಮಹಾಮಾರಿ ಕೊರೊನ ಹೊಡೆತಕ್ಕೆ ಜನಸಾಮಾನ್ಯರಿಗೆ ಕೆಲಸ ಇಲ್ಲದೆ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆದರ ಏರಿಕೆ ಮಾಡಿರುವುದು ಖಂಡನೀಯ. ಈ ದೇಶದಲ್ಲಿ ಬಡತನ ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಗ್ರಾಮೀಣ ಜನರಿಗೆ ಬೆಲೆ ಏರಿಕೆ ದೊಡ್ಡ ಹೊಡೆತ ಕೊಟ್ಟಂತಾಗಿದೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಈ ಕೂಡಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದರ ಇಳಿಕೆ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜಿ . ಕೆ . ನಾಗರಾಜ,ರಾಜಗೋಪಾಲ್,ಮಹಾದೇವಪ್ಪ,ಮಂಜುನಾಥ,ಸೇರಿದಂತೆ ಇತರರು ಉಪಸ್ಥಿತರಿದ್ದರು.