ಪೆಟ್ರೋಲ್,ಡಿಸೇಲ್ ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ರಾಯಚೂರು, ಜೂ.೯- ಕೇಂದ್ರ ಸರ್ಕಾರದ ಪೆಟ್ರೋಲ್.ಡಿಸೇಲ್. ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಸಿಪಿಐಎಂ ಮುಖಂಡರು
ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕಳೆದ ಒಂದುವರೆ ವರ್ಷದಿಂದ ದೇಶದ ಜನತೆ ತೀವ್ರ ರೀತಿಯ ಕೋವಿಡ್ ಸಂಕಷ್ಟ ಎದುರಿಸುತ್ತಿರುವಾಗಲೆ ಅವರ ಸಂಕಷ್ಟ ನಿವಾರಣೆಗಾಗಿ ಯಾವುದೇ ಕ್ರಮ ವಹಿಸದೆ.ಬದಲಿಗೆ ಅವರ ಮೇಲೆ ಭಾರಿ ಬೆಲೆ ಏರಿಕೆಯ ಹೋರೆ ಹೇರುವ ಕ್ರೌರ್ಯ ವನ್ನು ಮೆರೆಯುತ್ತಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಪೆಟ್ರೋಲ್ ಬೆಲೆಯು ೨೫ ರೂ ಗಳಷ್ಟು ಹೆಚ್ಚಳಗೊಂಡಿದೆ.ಕಳೆದ ತಿಂಗಳಲ್ಲಿ ೧೬ ಭಾರಿ ಬೆಲೆ ಏರಿಸಲಾಗಿದೆ. ಈಗ ಅದು ೧೦೦ ರೂಪಗಳನ್ನು ದಾಟಿದೆ ಡಿಸೇಲ್ ಬೆಲೆ ೧೦೦ ರ ಹತ್ತಿರವಾಗಿದೆ. ಅಡುಗೆ ಅನಿಲವು ಭಾರಿ ಏರಿಕೆ ಅಗಿ ಸುಮಾರು ೯೦೦ ರೂ ಅಗಿದು.ಇದು ಕೇಂದ್ರ ಸರ್ಕಾರದ ಅತ್ಯಂತ ಅಸಹನೀಯವಾಗಿದೆ ಎಂದು ದೂರಿದರು.
ತೈಲ ಬೆಲೆ ಏರಿಕೆಯಿಂದ ಸಹಜವಾಗಿಯೇ ಅಗತ್ಯ ವಸ್ತುಗಳ ಬೆಲೆಗಳ ಏರಿಕೆಗೆ ಕಾರಣವಾಗಿದೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದಲ್ಲಿ ಯಾವುದೇ ಬೆಲೆ ಏರಿಕೆ ಆಗದಿದ್ದರೂ ದೇಶದಲ್ಲಿ ಈ ಪ್ರಮಾಣದಲ್ಲಿ ಇವುಗಳ ಬೆಲೆಗಳು ಏರಿಕೆಯಾಗಲೂ ಕೇಂದ್ರ ಸರ್ಕಾರವೇ ನೇರ ಹೊಣೆಗಾರನಾಗಿದೆ. ಇದು ಜನತೆಯನ್ನು ದೊಡ್ಡ ಮಟ್ಟದಲ್ಲಿ ಲೂಟಿಗೂಳಪಡಿಸುವ ಸರ್ಕಾರದ ಲೂಟಿಕೂರ ನೀತಿಯಾಗಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ.ಕೆ.ಜಿ.ವಿರೇಶ,ಹೆಚ್.ಪದ್ಮಾ, .ಡಿ.ಎಸ್. ಶರಣಬಸವ, ಗೋಕಾರಮ್ಮ,ನಾಗೇಂದ್ರ, ಪ್ರಭಾವತಿ,ಆದಿ ಲಕ್ಷ್ಮೀ ,ರಹೀಮತ್, ಶ್ರೀಧರ, ಸೇರಿದಂತೆ ಇತರರು ಇದ್ದರು.