ಪೆಟ್ರೋಲಿಯಂ ಉದ್ಯಮದ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ

ಕಲಬುರಗಿ,ಜೂ.4-ಆಹಾರ‌ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ನಗರದ ಪೆಟ್ರೋಲಿಯಂ ಉದ್ಯಮದ ಅಧಿಕಾರಿ-ಸಿಬ್ಬಂದಿಗಳಿಗೆ ನಗರದ ಲಾಹೋಟಿ ಪೆಟ್ರೋಲ್ ಪಂಪ್ ನಲ್ಲಿ ಕೋವಿಡ್ ಲಸಿಕೆ ನೀಡಲಾಯಿತು.
ಹೆಚ್.ಪಿ.ಸಿ.ಎಲ್., ಬಿ.ಪಿ.ಸಿ.ಎಲ್ ಹಾಗೂ ಐ.ಓ.ಸಿ.ಎಲ್ ಸಂಸ್ಥೆಯ ಡೀಲರ್, ಮ್ಯಾನೇಜರ್, ಸಿಬ್ಬಂದಿ, ಗ್ಯಾಸ್ ಸಿಲೆಂಡರ್‌ ವಿತರಕರು, ಪೆಟ್ರೋಲ್-ಡೀಸೆಲ್ ವಿತರಕರು ಹೀಗೆ ಸುಮಾರು 300 ಜನರು ಲಸಿಕೆ ಪಡೆದರು.
ಈ ಸಂದರ್ಭದಲ್ಲಿ ಆಹಾರ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳು ಹಾಗೂ ಪೆಟ್ರೋಲಿಯಂ ಸಂಸ್ಥೆಯ ಅಧಿಕಾರಿಗಳು ಇದ್ದರು.