ಪೆಟ್ರೋಮ್ಯಾಕ್ಸ್ ಬೆಳಕಿನಲ್ಲಿ ಕಚಗುಳಿ..

“ಬನ್ನಿ ಪಂಪ್ ಮಾಡೋಣ, ನಂದಿಕಂಬ ನಿಲ್ಸೋಕೆ ಜಾತ್ರೆ ಮಾಡಿಕೊಳ್ಳೋಕೆ ಆಗುತ್ತಾ, ಮಾತನಾಡಲು ಬೀಜ ಬೇಕು, ಮನೆಗೆ ಪೋನ್ ಮಾಡಿದ್ರೆ ಕಾಂಡೋಮ್ ಕೇಳಿದ್ರಂತೆ,, ನಾವ್ಯಾರು ** ಮಾಡಿಲ್ಲ ಅನ್ಕೋತ್ತೀರಾ, ರತಿ ವಿಜ್ಞಾನ ಮಾತ್ರ ಓದಿಕೊಂಡಿರೋದು..ಇನ್ನೆರಡು ದಿನ ನಿಮ್ಮನೆಯಲೂ ಉಕ್ಕುಸ್ತೀರಾ…..”.
ಇದು ಬರೀ ಟ್ರೈಲರ್ ಮಾತ್ರ. ಇನ್ನೂ ಸಿನಿಮಾ ಬಾಕಿ ಇದೆ ಎನ್ನುವ ಮಾತನ್ನು ಅಕ್ಷರಷಃ ನಿರೂಪಿಸಲು ಮುಂದಾಗಿದೆ “ಪೆಟ್ರೋಮಾಕ್ಸ್” ಚಿತ್ರತಂಡ.
ಮೂವರು ಹುಡುಗರು ಮತ್ತು ಇಬ್ಬರು ಹುಡುಗಿಯರ ನಡುವೆ ನಡೆಯುವ ಫಿಲ್ಟರ್ ಇಲ್ಲದ ಸಹಜ ಸಂಭಾಷಣೆ, ಚೇಷ್ಟೆ, ಕಚಗುಳಿ, ಒಂದಷ್ಟು ಗಂಭೀರತೆ, ಅನಾಥ ಹುಡುಗರ ಬದುಕಿನ ಕಥೆಯನ್ನು ತೆರೆಯ ಮೇಲೆ ಕಟ್ಟಿಕೊಡಲು ನಿರ್ದೇಶಕ ವಿಜಯ್ ಪ್ರಸಾದ್ ಮತ್ತವರ ತಂಡ ಮುಂದಾಗಿದೆ.
“ನೀರ್ ದೋಸ್’ ಚಿತ್ರದ ಬಳಿಕ ಅಂತಹುದೇ ಫ್ಲೇವರ್ ನ ಅಂಶಗಳನ್ನು ಮುಂದಿಟ್ಟುಕೊಂಡು ಪ್ರೇಕ್ಷಕರಿಗೆ ಕಚಗುಳಿ ಇಡುತ್ತಲೇ ಒಂದಷ್ಟು ಜೀವನದ ವಾಸ್ತವವನ್ನು ಪರದೆಯ ಮೇಲೆ ಅನಾವರಣ ಮಾಡಲು ತಂಡ ಉದ್ದೇಶಿಸಿದೆ.
ನಟ ನೀನಾಸಂ ಸತೀಶ್ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ನಟಿಯರಾದ ಹರಿಪ್ರಿಯಾ, ಕಾರುಣ್ಯ ರಾಮ್, ನಟರಾದ ಗೊಂಬೆಗಳ ಲವ್ ಅರುಣ್ , ನಾಗಭೂಷಣ್ ಸೇರಿದಂತೆ ಹಿರಿ ಕಿರಿಯ ಕಲಾವಿದರು ಕಾಣಿಸಿಕೊಂಡಿರುವ ಈ ಚಿತ್ರದ ಟ್ರೈಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದ್ದು ಟ್ರೆಂಡಿಂಗ್ನಲ್ಲಿದೆ. ಅಷ್ಟೇ ಅಲ್ಲ ಸೆನ್ಸೇಷನ್ ಸೃಷ್ಟಿ ಮಾಡಿದೆ.
ಇದು ಸಹಜವಾಗಿ ನಟ ನೀನಾಸಂ ಸತೀಶ್, ನಿರ್ದೇಶಕ ವಿಜಯ ಪ್ರಸಾದ್ ಸೇರಿದಂತೆ ಇಡೀ ತಂಡದಲ್ಲಿ ಚಿತ್ರದ ಬಗ್ಗೆ ಮತ್ತಷ್ಟು ಆತ್ಮ ವಿಶ್ವಾಸ ಹೆಚ್ಚಿಸಿದೆ.
ನಾಲ್ವರು ಅನಾಥ ಹುಡುಗರು ಗೂಡು ಮಾಡಿಕೊಳ್ಳಲು ಹೊರಟಾಗ ಎದುರಾಗುವ ಸಮಸ್ಯೆ ಸೇರಿದಂತೆ ಮತ್ತಿತರ ವಿಷಯವನ್ನು ಚಿತ್ರದ ಮೂಲಕ ಕಟ್ಟಿಕೊಡುವ ಪ್ರಯತ್ನವೇ ಪೆಟ್ರೋಮಾಕ್ಸ್.ಇಡೀ ಚಿತ್ರವನ್ನು ಮೈಸೂರಿನ ಸುತ್ತ ಮುತ್ತಲ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದೆ.
ಚಿತ್ರದಲ್ಲಿ ಅಚ್ಯುತ್ ಕುಮಾರ್, ಸುಧಾ ಬೆಳವಾಡಿ, ಪದ್ಮಜಾ ರಾವ್, ವೀಣಾ ಸುಂದರ್, ಸಿದ್ಲಿಂಗು ಶ್ರೀಧರ್, ಮೋಹನ್ ಜುನೇಜಾ, ವತ್ಸಲಾ ಮೋಹನ್ ಮತ್ತಿತರಿದ್ದಾರೆ.ನಿರಂಜನ್ ಬಾಬು ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತವಿದೆ.
ಬದುಕು,ಬೆಳಕು
ಬದುಕು ಮತ್ತು ಬೆಳಕಿನ ವಿಷಯಗಳನ್ನು ಪೆಟ್ರೋಮಾಕ್ಸ್ ಮೂಲಕ ತೆರೆಯ ಮೇಲೆ ಕಟ್ಟಿಕೊಡಲು ನಿರ್ದೇಶಕ ವಿಜಯ ಪ್ರಸಾದ್ ಮತ್ತು ನಟ ನೀನಾಸಂ ಸತೀಶ್ ಜೋಡಿ ಮುಂದಾಗಿದೆ. ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಸಂಭಾಷಣೆಗಳು ಕಚಗುಳಿ ಇಟ್ಟರೆ ಕೆಲವೊಮ್ಮೆ ಮುಜುಗರ ತರಿಸಲಿದೆ. ಅದಕ್ಕೆ ಚಿತ್ರದಲ್ಲಿ ಏನು ಸಮಜಾಷಿಯಿ ನೀಡಿದೆ ಎನ್ನುವುದು ಸದ್ಯಕ್ಕಿರುವ ಕುತೂಹಲ.