ಪೆಟ್ರೋಕೆಮಿಕಲ್ ಇಂಜಿನಿಯರ್ ಕೋರ್ಸ್ ಗೆ ಆಹ್ವಾನ

ದಾವಣಗೆರೆ.ಮೇ.೧೬:  ಮೈಸೂರಿನಲ್ಲಿರುವ ಕೇಂದ್ರೀಯ ಕೆಮಿಕಲ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ ವತಿಯಿಂದ ಮೆಟ್ರಿಕ್ ನಂತರದ ಉದ್ಯೋಗ ಭರವಸೆಯ ಪಾಲಿಮಾರ್ ಮತ್ತು ಪ್ಲಾಸ್ಟಿಕ್ ಆಧಾರಿತ ಕೋರ್ಸುಗಳನ್ನು ಪ್ರಸ್ತುತ ಪಡಿಸಲಾಗಿದೆ ಎಂದು ಸಿಪೆಟ್ ಸಹಾಯಕ ತಾಂತ್ರಿಕ ಅಧಿಕಾರಿ ಲಕ್ಷ್ಮಣ್ ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿಪೆಟ್ ಸಂಸ್ಥೆಯು ಭಾರತ ಸರ್ಕಾರದ ರಸಾಯನ ಪೆಟ್ರೋ ರಸಾಯನ, ರಸಗೊಬ್ಬರ ಸಚಿವಾಲಯದ ಸ್ವಾಯುತ್ತ ಸಂಸ್ಥೆಯಾಗಿದೆ. ಪ್ಲಾಸ್ಟಿಕ್ ಉತ್ಪನ್ನಗಳು ದೇಶದ ಪ್ರಗತಿಗೂ ತಮ್ಮದೇ ಆದ ಕೊಡುಗೆ ನೀಡಿದೆ. ಹಾಗಾಗಿ ಇವುಗಳ ಉತ್ಪನ್ನಗಳ ತಯಾರಿ ಉತ್ತೇಜಿಸಲು ಕೇಂದ್ರ ಸರ್ಕಾರ ಪೆಟ್ರೋಕೆಮಿಕಲ್ ಇಂಜಿನಿಯರ್ ಮತ್ತು ತಂತ್ರಜ್ಞಾನ ಸಂಸ್ಥೆಯನ್ನು‌ ಸ್ಥಾಪಿಸಿದೆ ಎಂದು ಮಾಹಿತಿ ನೀಡಿದರು.ವಿಜ್ಞಾನ, ತಂತ್ರಜ್ಞಾನ ವೈದ್ಯಕೀಯ, ಕೃಷಿ, ಆರೋಗ್ಯ, ಸಾರಿಗೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಪಾಲಿಮರ್, ಪ್ಲಾಸ್ಟಿಕ್ ಅವಶ್ಯಕತೆ ಇದ್ದೇ ಇದೆ. ಅಲ್ಲದೇ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಸಿದೆ. ಕೇಂದ್ರ ಸರ್ಕಾರ ಕೇಂದ್ರೀಯ ಪೆಟ್ರೋಕೆಮಿಕಲ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಶಿಕ್ಷಣ ಸಂಸ್ಥೆಯು ಶೈಕ್ಷಣಿಕ, ತಂತ್ರಜ್ಞಾನ, ಸಂಶೋಧನೆ ವ್ಯವಸ್ಥೆಯಲ್ಲಿ ಸ್ನಾತಕ ಡಿಪ್ಲೊಮಾ, ಡಿಪ್ಲೊಮಾ ಕೋರ್ಸ್ ನೀಡಲಾಗುತ್ತದೆ ಎಂದು ಹೇಳಿದರು.ಸುದ್ದಿಗೋಷ್ಟಿ ಯಲ್ಲಿ ಸಹಾಯಕ ತಾಂತ್ರಿಕ ಅಧಿಕಾರಿ ಡಿ.ಎಲ್.ಶ್ರೀನಾಥ್ ಇದ್ದರು.