ಪೆಂಕಾಕ್ ಸಿಲಾತ್: ಮುಬಾರಕ್ ರಾಷ್ಟ್ರಮಟ್ಟಕ್ಕೆ

ಬೀದರ್: ಮಾ.18:ಇಲ್ಲಿಯ ರಾಯಲ್ ಪದವಿ ಕಾಲೇಜಿನ ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿ ಮುಬಾರಕ್ ಮಂದಕನಳ್ಳಿ ರಾಷ್ಟ್ರಮಟ್ಟದ ಪೆಂಕಾಕ್ ಸಿಲಾತ್ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ.

ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಗುಲಬರ್ಗಾ ವಿಶ್ವವಿದ್ಯಾಲಯದ ಅಂತರ ಕಾಲೇಜು ಮಟ್ಟದ ಪೆಂಕಾಕ್ ಸಿಲಾತ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಅರ್ಹತೆ ಗಳಿಸಿದರು.

ತಮ್ಮ ಬಳಿ ಮೂರು ವರ್ಷ ಉಚಿತ ತರಬೇತಿ ಪಡೆದ ಮುಬಾರಕ್ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಕ್ಕೆ ಕರಾಟೆ ತರಬೇತುದಾರ ಸುವಿತ್ ಮೋರೆ ಸಂತಸ ವ್ಯಕ್ತಪಡಿಸಿದರು.