ತಾಳಿಕೋಟೆ:ಜು.30: ಪಟ್ಟಣದ ಕುಮಾರಿ ಪೃಥ್ವಿ ಹೆಗಡೆ ಅವಳಿಗೆ ಧಾರವಾಡದ ನಾಡಿನ ಸಮಾಚಾರ ಸೇವಾ ಸಂಘದ 2ನೇ ವರ್ಷಿಕೋತ್ಸವ ಅಂಗವಾಗಿ ನಾಡಿನ ಸಮಾಚಾರ ದಿನಪತ್ರಿಕೆಯ ವತಿಯಿಂದ ಆಯೋಜಿಸಲಾದ ಪತ್ರಿಕಾ ದಿನಾಚರಣೆ ಹಾಗೂ ಧಾರವಾಡ ಜ್ಞಾನ ದರ್ಶಿನಿ ಸಂಭ್ರಮ ಕಾರ್ಯಕ್ರಮದಲ್ಲಿ ನಾಟ್ಯ ಮಯೂರಿ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಗಿದೆ.
ಶನಿವಾರರಂದು ಧಾರವಾಡದ ರಂಗಾಯಣ ಸಾಂಸ್ಕøತಿಕ ಸಮುಚ್ಚಯ ಸಭಾಭವನದಲ್ಲಿ ನಡೆದ ಧಾರವಾಡ ಜ್ಞಾನ ದರ್ಶಿನಿ ಸಂಭ್ರಮ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಬಸವರಾಜ ವಾಯ್ ಉಪ್ಪಾರಟ್ಟಿ ಅವರ ನೇತೃತ್ವದಲ್ಲಿ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಗಿದೆ.
ಪೃಥ್ವಿ ಹೆಗಡೆ ಈಗಾಗಲೇ 660 ಕ್ಕೂ ಹೆಚ್ಚು ನೃತ್ಯ ಪ್ರದರ್ಶನವನ್ನು ನೀಡಿದ್ದು ಅದರಲ್ಲಿ 223 ಭರತನಾಟ್ಯ ಮತ್ತು ಜಾನಪದ, ವಚನ ನೃತ್ಯ, ಚಂದನ ವಾಹಿನಿಯಲ್ಲಿ ನೃತ್ಯ ಪ್ರದರ್ಶಿಸಿದ್ದಾಳೆ.
ಪೃಥ್ವಿ ಹೆಗಡೆ ಇವಳಿಗೆ ನಾಟ್ಯ ಮಯೂರಿ ರಾಷ್ಟ್ರೀಯ ಪ್ರಶಸ್ತಿ ದಕ್ಕಿದಕ್ಕೆ ತಾಳಿಕೋಟೆಯ ಶ್ರೀ ವಿರಕ್ತೇಶ್ವರ ಭರತನಾಟ್ಯ ತರಬೇತಿ ಸಂಸ್ಥೆಯ ಅಧ್ಯಕ್ಷ ಶಿಕ್ಷರಾಗಿರುವ ವಿನೋದಕುಮಾರ ಚಿಕ್ಕಮಠ ಅವರು ಅಭಿನಂದಿಸಿದ್ದಾರೆ.