
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೧೭: ದಾವಣಗೆರೆಯ ಹುಡುಗ ಪೃಥ್ವಿ ಶಾಮನೂರು ನಟಿಸಿರುವ ಚೊಚ್ಚಲ ಚಿತ್ರ ‘ಪದವಿ ಪೂರ್ವ’ ಸಿನಿಮಾದ ನಟನೆಗೆ ಬೆಸ್ಟ್ ಕನ್ನಡ ಡೆಬ್ಯೂಟ್ ಆಕ್ಟರ್ ಸೈಮಾ ಅವಾರ್ಡ್ ದೊರಕಿದೆ ಎಂದು ಖುಷಿ ಇವೆಂಟ್ಸ್ ನ ಮಯೂರ್ ಸಂತಸ ಹಂಚಿಕೊಂಡರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೃಥ್ವಿ ಶಾಮನೂರು ಇಷ್ಟು ಚಿಕ್ಕವಯಸ್ಸಿನಲ್ಲೇ ತಮ್ಮ ಮೊದಲ ಚಿತ್ರಕ್ಕೆ ದಕ್ಷಿಣ ಭಾರತದ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ ಪಡೆದಿರುವುದು ದಾವಣಗೆರೆಗೂ ಹೆಮ್ಮೆಯ ವಿಷಯವಾಗಿದೆ ಎಂದರು.ತಮ್ಮ ೧೬ನೇ ವಯಸ್ಸಿನಲ್ಲೇ ಮಾಡೆಲಿಂಗ್ ಕ್ಷೇತ್ರದಲ್ಲಿ ಬ್ಯಾಂಕಾಕ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಮಿಸ್ಟರ್ ಟೀನ್ ಪ್ರಿನ್ಸ್ ಅಂಡ್ ಪ್ರಿನ್ಸೆಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ, ಮಿಸ್ಟರ್ ಟೀನ್ ಇಂಡಿಯಾ ರನ್ನರ್ ಆಫ್ ಆಗಿ ವಿಜೇತರಾದರು. ನಂತರ ಯೋಗರಾಜ್ ಭಟ್ಟರ ಪದವಿ ಪೂರ್ವ ಸಿನಿಮಾದಲ್ಲಿ ನಟಿಸಿ, ನಿನ್ನೆ ದುಬೈನಲ್ಲಿ ನಡೆದಕಾರ್ಯಕ್ರಮದಲ್ಲಿ ಸೈಮಾ ಅವಾರ್ಡ್ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.ಪೃಥ್ವಿ, ದರ್ಶನ್ ನಟಿಸಿರುವ ಗರಡಿ ಚಿತ್ರದಲ್ಲಿ ನಟಿಸುತ್ತಿದ್ದು, ಪರಮೇಶ್ ಗುಂಡ್ಕಲ್ ಅವರು ನಿರ್ದೇನದ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ.ಹಾಗೂ ಯೋಗರಾಜ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ, ನವೀನ್, ಲಿಖಿತ್ ಶೆಟ್ಟಿ, ಕಾರ್ತೀಕ್ ಹಿರೇಮಠ ಉಪಸ್ಥಿತರಿದ್ದರು.