ಪೃಥ್ವಿರಾಜ ಉತ್ತಮ ಸಾಧನೆ

ಹುಬ್ಬಳ್ಳಿ,ಸೆ 25:ಬೆನಕ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವರ್ಷದ ವಿದ್ಯಾರ್ಥಿಯಾದ ಪೃಥ್ವಿರಾಜ ಗಸ್ತಿ 600ಕ್ಕೆ 573 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾನೆ.
ಕೋವಿಡ್‍ನ ಕಾರಣದಿಂದ ಆನಲೈನ್ ಕ್ಲಾಸ್‍ಗಳನ್ನು ಅವಲಂಬಿಸಿದ್ದ ನನಗೆ ನನ್ನ ಪ್ರಾಧ್ಯಾಪಕ ವೃಂದ ಉತ್ತಮ ಮಾರ್ಗದರ್ಶನದ ಪ್ರಭಾವದಿಂದಾಗಿ ಕೃಪಾಂಕಿತ ಅಂಕಗಳನ್ನು ನಿರಾಕರಿಸಿ, ಚಾಲೆಂಜನ್ನು ಸ್ವೀಕರಿಸಿ ಲಿಖಿತ ಪರೀಕ್ಷೆಯನ್ನು ಬರೆಯಲು ಪ್ರೋತ್ಸಾಹ ದೊರೆಯಿತು. ನನ್ನ ಈ ಸಾಧನೆಗೆ ಪ್ರೇರಣೆಯೇ ನಮ್ಮ ಕಾಲೇಜಿನ ಪ್ರಾಧ್ಯಾಪಕ ವೃಂದ. ಅವರಿಗೆ ನಾನು ಸದಾ ಚಿರಋಣಿ ಎಂದು ಪೃಥ್ವಿರಾಜ ಸಂತಸವನ್ನು ವ್ಯಕ್ತಪಡಿಸಿದ್ದಾನೆ.
ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದು ಕಾಲೇಜಿಗೆ ಕೀರ್ತಿ ತಂದ ಪೃಥ್ವಿರಾಜನನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಶೈಲಜ ವಿನೋದ ಹಾಗೂ ಚೇರಮನರಾದ ಶ್ರೀ ವಿನೋದ ನಾಯಕ ಅಭಿನಂದಿಸಿ, ಪಾಲಕರೊಂದಿಗೆ ಸನ್ಮಾನಿಸಿದರು. ಪ್ರಾಧ್ಯಾಪಕ ವೃಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.