ಪೂರ್ವ ಶಾಲೆಗೆ ಶೇ.೯೮ ಅಂಕ

ಕೋಲಾರ, ಜು.೨೭: ನಗರದ ಆರ್.ಎಲ್.ಜಾಲಪ್ಪ ಕೇಂದ್ರಿಯ ಶಾಲೆಗೆ ಸಿಬಿಎಸ್‌ಇ ೧೦ ನೇ ತರಗತಿ ಪರೀಕ್ಷೆಯಲ್ಲಿ ಸತತ ೧೧ನೇ ವರ್ಷ ಶೇ.೧೦೦ ಫಲಿತಾಂಶ ಲಭ್ಯವಾಗಿದೆ.
ಶಾಲೆಯ ವಿದ್ಯಾರ್ಥಿನಿ ಡಿ.ಅಪೂರ್ವ ೫೦೦ ಅಂಕಗಳಿಗೆ ೪೯೦ ಅಂಕಗಳ ಪಡೆದು ಶೇ.೯೮ ಫಲಿತಾಂಶದ ಮೂಲಕ ಶಾಲೆಗೆ ಪ್ರಥಮರಾಗಿ ಹೊರ ಹೊರಹೊಮ್ಮಿದ್ದಾರೆ.
ಪರೀಕ್ಷೆಗೆ ಒಟ್ಟು ೭೩ ವಿದ್ಯಾರ್ಥಿಗಳು ಹಾಜರಾಗಿದ್ದು, ೨೮ ವಿದ್ಯಾರ್ಥಿಗಳು ಶೇ.೮೦ ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದು, ೪೧ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉಳಿದ ೪ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಶೇ.೧೦೦ ರಷ್ಟು ಫಲಿತಾಂಶವನ್ನು ತಂದು ಕೊಟ್ಟಿದ್ದಾರೆ.
ವಿದ್ಯಾರ್ಥಿಗಳಾದ ಬಿ.ಎಸ್.ರಚನ, ಎಂ.ಭವಾನಿ, ಎ.ಎಸ್.ಜೀವನ್‌ಗೌಡ ಶೇ.೯೭, ಮುಸಿಯಾ ಕೌಸರ್, ಅರ್ಬಿಯಾ ನೂರೈನ್ ಶೇ.೯೫, ಕೆ.ಆರ್.ಶ್ರೀವತ್ಸಲ ಶೇ.೯೪, ಎಂ.ಗೋಕುಲ್, ವಿ.ಎಲ್.ತೇಜಶ್ರೀ ಶೇ.೯೧, ಜಿ.ಪಲ್ಲವಿ, ಬಿ.ಸಮೀಕ್ಷ ಶೇ.೯೦. ಎಂ.ಭರತ್, ಕೆ.ಎಸ್.ಪ್ರೀತಮ್, ಎಸ್.ಸಭಾ ಅಂಜುಮ್ ಶೇ.೮೯, ಸಿ.ಎಚ್.ಅಕ್ಷಯಾ, ಕೆ.ಎಸ್.ರಚನಾ ಶೇ.೮೮, ದುಶ್ಯಂತ್ ಯಾದವ್ ಶೇ.೮೭, ಸುವೈಬ ಮಹಮ್ಮದ್, ಜೆ.ಚಾತುರ್ಯ ಶೇ.೮೬, ಕೆ.ಎನ್.ಕೃತಿಕ ಶೇ.೮೫, ಎಸ್.ತನುಶ್ರೀ, ಎನ್.ಹರ್ಷಿತ, ಎನ್.ಆರ್.ಅಪೂರ್ವ ಶೇ.೮೪, ಎಂ.ವೈಭವ ಲಕ್ಷ್ಮಿ ಶೇ.೮೨, ಸಿ.ಕೆ.ದಿಯಾಮೋಲ್, ಜಿ.ಎಸ್.ಹೇಮಂತ್ ಕುಮಾರ್, ಕೆ.ಎಸ್.ಶ್ರೀಕರ ಶೇ.೮೦ ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದಾರೆ.
ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಕೀರ್ತಿ ತರಲು ಸಹಕರಿಸಿದ ಕಾರಣಕರ್ತರಾದವರನ್ನು ಆಡಳಿತ ಮಂಡಳಿ ಅಧ್ಯಕ್ಷ ಜಿ.ಎಚ್.ನಾಗರಾಜ್, ಕಾರ್ಯದರ್ಶಿ ಹನುಮಂತರಾಜ್, ಉಪಾಧ್ಯಕ್ಷ ಆರ್.ರಾಜೇಂದ್ರ, ಆಡಳಿತಾಧಿಕಾರಿ ಹನುಮಂತರಾವ್ ಮತ್ತು ಶಾಲೆಯ ಪ್ರಾಂಶುಪಾಲ ಲಕ್ಷ್ಮೀಭಟ್‌ರನ್ನು ಅಭಿನಂದಿಸಿದ್ದಾರೆ.