ಸಂಜೆವಾಣಿ ವಾರ್ತೆಮೊಳಕಾಲ್ಮೂರು,ಆ.29: ಪಟ್ಟಣದ ತಾಲೂಕು ಕಚೇರಿಯಲ್ಲಿ ಶ್ರೀ ಕೃಷ್ಣ ಜಯಂತಿ ಆಚರಣೆ ಅಂಗವಾಗಿ ಇಂದು ಪೂರ್ವ ಬಾವಿ ಸಭೆ ನಡೆಯಿತು.ಸಭೆಯಲ್ಲಿ ತಹಶೀಲ್ದಾರ್ ಎಂ. ವಿ. ರೂಪ ಮಾತನಾಡಿ, ಸಪ್ಟೆಂಬರ್ 6 ರಂದು ನಡೆಯಲಿರುವ ಶ್ರೀ ಕೃಷ್ಣ ಜಯಂತಿ ಆಚರಣೆಯನ್ನು ಅಚ್ಚುಕಟ್ಟಾಗಿ ಸಾಂಕೇತಿಕ ವಾಗಿ ಕಛೇರಿಯಲ್ಲಿ ನಡೆಸಲಾಗುವುದು ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು. ಸಭೆಯಲ್ಲಿ ಹಲವು ವಿಚಾರಗಳನ್ನು ಚರ್ಚಿಸಲಾಯಿತು. ಸಾಂಕೇತಿಕವಾಗಿ ತಾಲೂಕು ಕಚೇರಿಯಲ್ಲಿ ಸಪ್ಟೆಂಬರ್ 6 ರಂದು ಶ್ರೀ ಕೃಷ್ಣ ಜಯಂತಿಯನ್ನು ನೇರವೆರಿಸಿದ ಬಳಿಕ ತಾಲೂಕಿನಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ಕೃಷ್ಣ ಸಮಾಜದವರು ಇರುವದರಿಂದ ಜಯಂತಿಯನ್ನು ಅಚ್ಚುಕಟ್ಟಾಗಿ ಸಮಾ ದವರೆಲ್ಲಾ ಸೇರಿ ಒಂದು ದಿನಾಂಕವನ್ನು ನಿಗದಿ ಪಡಿಸಿ ಮಾಡುವುದೆಂದು, ‘ ತಾಲೂಕು ಸಮಾಜದ ಅದ್ಯಕ್ಷ ಗುಂಡ್ಲೂರು ಕರಿಯಣ್ಣ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸ ಕ ಅಧಿಕಾರಿ ಶ್ರೀಮತಿ ಮಾಲತಿ, ಪ ಸಂ ಇ ಸ ನೀ ಎಚ್. ರಂಗಪ್ಪ ಕೆ ಎಸ್ ಆರ್ ಟಿ ಸಿ ಇಂಜಿನಿಯರ್ ನಾಗರಾಜ್ ಹಾಗೂ ಸಮಾಜದ ಮುಖಂಡರಾದ ಆರ್. ವೆಂಕಟೇಶ್, ಮರ್ಲಹಳ್ಳಿ ರವಿಕುಮಾರ್, ಶಿವಲಿಂಗ, ಶಿವಮೂರ್ತಿ, ಜೆ, ಎಸ್. ಜಯಣ್ಣ, ನರಸಿಂಹ ಇನ್ನು ಮುಂತಾದವರಿದ್ದರು.