ಪೂರ್ವಾಪರ ಮಾಹಿತಿ ಇಲ್ಲವೆಂದ ಮೇಲೆ ಸಭೆಗೆ ಯಾಕ್ರೀ ಬರ್ತೀರಿ? : ಅಧಿಕಾರಿಗಳಿಗೆ ಪರಿಮಳ ಶ್ಯಾಂ ತರಾಟೆ

ಮೈಸೂರು,ನ.11: ಯುವಜನ ಹಾಗೂ ಕ್ರೀಡಾ ಇಲಾಖೆ ಅಧಿಕಾರಿ ಓಂ ಪ್ರಕಾಶ್ ಅವರಿಗೆ ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳ ಶ್ಯಾಮ್ ತರಾಟೆಗೆ ತೆಗೆದುಕೊಂಡ ಘಟನೆ ಇಂದು ಜಿ.ಪಂ.ಕೆಡಿಪಿ ಸಭೆಯಲ್ಲಿ ನಡೆದಿದೆ.
ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳಾ ಶ್ಯಾಂ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು. ಯುವಜನ ಹಾಗೂ ಕ್ರೀಡಾ ಇಲಾಖೆಯಲ್ಲಿ ಕಳೆದ ಸಾಲಿನ ಅನುದಾನದ 78 ಲ್ಯಾಪ್ಸ್ ಆಗಿರುವ ಹಿನ್ನೆಲೆಯಲ್ಲಿ ಯುವಜನ ಹಾಗೂ ಕ್ರೀಡಾ ಇಲಾಖೆ ಅಧಿಕಾರಿ ಓಂ ಪ್ರಕಾಶ್ ಅವರನ್ನು ಪರಿಮಳ ಶ್ಯಾಮ್ ತರಾಟೆ ತೆಗೆದುಕೊಂಡರು. ಓಂ ಪ್ರಕಾಶ್ ಅವರು ನಾನು ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ಇಲಾಖೆ ಕಾರ್ಯಯೋಜನೆಗಳ ಕುರಿತು ಮಾಹಿತಿ ಇಲ್ಲ. ಹಿಂದಿನ ಇಲಾಖಾ ಅಧಿಕಾರಿ ನನಗೆ ಇಲಾಖೆಯ ಕಾರ್ಯಯೋಜನೆಗಳ ಮಾಹಿತಿ ನೀಡಿಲ್ಲವೆಂದು ಹೇಳಿದರು. ಇದಕ್ಕೆ ಗರಂ ಆದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳಾ ಶ್ಯಾಂ, ಇಲಾಖೆ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲವೆಂದ ಮೇಲೆ ಏನು ಕೆಲಸ ಮಾಡುತ್ತೀರಿ, ಸಭೆಗೆ ಇಲಾಖೆಯ ಪೂರ್ವಾಪರ ಮಾಹಿತಿ ಇಲ್ಲವೆಂದ ಮೇಲೆ ಏಕೆ ಬರುತ್ತೀರಿ ಎಂದು ಕಿಡಿಕಾರಿದರು.
ಜಿಲ್ಲಾ ಶಾಲಾ ಮಕ್ಕಳ ಕಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಕ್ಕಳ ವಿದ್ಯಾಭ್ಯಾಸ ಕಲಿಕೆ ಶಾಲೆ ಪ್ರಾರಂಭದ ಸಿದ್ದತೆ ಕುರಿತು ಚರ್ಚೆ ನಡೆಯಿತು. ಸರ್ಕಾರಿ ಶಾಲಾ ಮಕ್ಕಳಿಗೆ ಆನ್ ಲೈನ್ ತರಗತಿ ವ್ಯವಸ್ಥೆ ಇಲ್ಲದ ಕಾರಣ ಮನೆಯಲ್ಲೇ ಪೆÇೀಷಕರಿಂದಲೇ ಕಲಿಕೆಗೆ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಕಳೆದ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶದ ಹಾಗೂ ಹೋಗುಗಳ ಚರ್ಚೆ ನಡೆಯಿತು. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಫಲಿತಾಂಶಕ್ಕೆ ಒತ್ತು ನೀಡಿ. ಪ್ರತಿ ತಿಂಗಳು ತಾಲೂಕಿನ ಬಿಇಒ ಗಳ ಜೊತೆ ಸಭೆ ಮಾಡಿ ಕಲಿಕೆ ಗುಣ ಮಟ್ಟ ಹೆಚ್ಚಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಪಂಚಾಯತ್ ಸದಸ್ಯ ಹಾಗೂ ಜಿಲ್ಲಾ ಶಿಕ್ಷಣ ಮತ್ತು ಆರೋಗ್ಯ ಅಧ್ಯಕ್ಷ ಮಂಜುನಾಥ್ ಸೂಚನೆ ನೀಡಿದರು.
ಶಾಲೆಗೆ ಬರುವ ಬಿಸಿಯೂಟದ ಬಗ್ಗೆ ಸರಿಯಾಗಿ ಗಮನ ಹರಿಸಬೇಕು. ಆಹಾರ ಪದಾರ್ಥಗಳ ಕ್ವಾಲೀಟಿ ಬಗ್ಗೆ ಹೆಚ್ಚಿನ ಗಮನಹರಿಸಿ. ಪ್ರತಿ ಶಾಲೆಗೆ ಹೋಗುವ ಆಹಾರ ಪದಾರ್ಥಗಳನ್ನು ಅಲ್ಲಿನ ಪ್ರಾಶುಂಪಾಲರು ಕಡ್ಡಾಯ ಪರೀಕ್ಷೆ ಮಾಡಬೇಕು. ತಾಲೂಕು ಅಧಿಕಾರಿಗಳು ಆಹಾರ ಪದಾರ್ಥಗಳ ಲೋಡ್ ಬಂದಾಗ ಕಡ್ಡಾಯವಾಗಿ ಆಯಾ ಶಾಲೆಗಳಿಗೆ ಭೇಟಿ ನೀಡಿ ಪದಾರ್ಥಗಳನ್ನು ಪರೀಕ್ಷೆ ಮಾಡಿ. ಆಹಾರ ಪದಾರ್ಥಗಳು ಕಳಪೆಯಾಗಿದ್ದಲ್ಲಿ ತಕ್ಷಣ ವಾಪಸ್ ಕಳುಹಿಸಿ. ಮಕ್ಕಳ ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿ.ಪಂ.ಸಿಇಓ ಡಿ.ಭಾರತಿ ಸೂಚನೆ ನೀಡಿದರು.
ಕೆಡಿಪಿ ಸಭೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಾಜರಾಗಿದ್ದರು.