ಪೂರ್ವಾಗ್ರಹಗಳಿಂದ ಹೊರಬರುವಂತೆ ಪಾಲಕರಿಗೆ ಸಿಇಓ ಕೆ.ಆರ್.ನಂದಿನಿ ಕರೆ

ಹೊಸಪೇಟೆ ಜೂ10: ಕರೋನಾ ಮುಂಬರುವ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬ ಹಿನ್ನೆಲೆಯಲ್ಲಿ ಮುಂಜಾಗೃತೆಗಾಗಿ ಮಕ್ಕಳ ಅಪೌಷ್ಠಿಕತೆ ನಿವಾರಿಸಲು ಜಿಲ್ಲಾಡಳಿತ ಮುಂದಾಗಿರುವುದು ಒಂದು ಮಾದರಿ ಕ್ರಮವಾಗಿದೆ ಎಂದು ಜಿಲ್ಲಾ ಪಂಚಾಯಿತ್ ಮುಖ್ಯಕಾಯ ನಿರ್ವಹಣಾಧಿಕಾರಿ ಕೆ.ಆರ್.ನಂದಿನ ಬಣ್ಣಿಸಿದರು.
ಈಕುರಿತು ಹೊಸಪೇಟೆಯಲ್ಲಿ ಬಾಲ ಜೈತನ್ಯ ಆರೈಕೆ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಷ್ಟ್ರದಾದ್ಯಂತ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬಿರಲಿದೆ ಎಂಬ ಮಾತುಗಳ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾಡಳಿತ ವಿವಿಧ ಇಲಾಖೆಗಳು ಸೇರಿದಂತೆ ಭಾರತೀಯ ಪಿಡಿಯಾಟ್ರೀಕ್ ಅಕೆಡಮಿ ಸಹಕಾರದಲ್ಲಿ ರಾಜ್ಯದಲ್ಲಿಯೇ ಮಾದರಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ ಈಗಾಗಲೇ ಅವಳಿ ಜಿಲ್ಲೆಯ ಬಳ್ಳಾರಿ, ಕೂಡ್ಲಗಿ, ಹಗರಿಬೊಮ್ಮನಹಳ್ಳಿ ಮತ್ತು ಹೂವಿನಹಡಗಲಿಯಲ್ಲಿ ಆರಂಭಿಸಲಾಗಿದ್ದು ಇಂದು ಹೊಸಪೇಟೆ ಸೇರಿದಂತೆ ಸಿರಗುಪ್ಪಾ, ಸಂಡೂರು ಹಾಗೂ ಹರಪನಹಳ್ಳಿಯಲ್ಲಿ ಆರಂಭಿಸುವ ಮೂಲಕ ಮಾದರಿ ಜಿಲ್ಲೆಯಾಗಲಿದೆ ಅಲ್ಲದೆ ಈ ಆರೈಕೆಯ ಕೇಂದ್ರಗಳಲ್ಲಿ ಈಗಾಗಲೇ 147 ಮಕ್ಕಳ ಆರೈಕೆ ನೊಂದಣಿ ಪ್ರಕ್ರೀಯೆ ಪೂರ್ಣಗೊಂಡಿದೆ ಎಂದರು.
ಜಿಲ್ಲಾ ಪಂಚಾಯಿತ್ ವ್ಯಾಪ್ತಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾಹಿತಿಯಂತೆ ಅವಳಿ ಜಿಲ್ಲೆಗಳಲ್ಲಿ ಅಪೌಷ್ಠಿಕತೆಯಿಂದ ಬಳಲುವ 825 ಮಕ್ಕಳನ್ನು ಗುರುತಿಸಲಾಗಿದೆ ಇವರಿಗೆ ಈ ಬಾಲ ಜೈತನ್ಯ ಆರೈಕೆ ಕೇಂದ್ರದಲ್ಲಿ ಎಲ್ಲಾ ಹಂತದ ಪರೀಕ್ಷೆಗಳನ್ನು ಮಾಡುವ ಹಾಗೂ ಅಪೌಷ್ಠಿಕತೆಯ ಹೊರತಾಗಿರುವ ಕಾಯಿಲೆಗಳಿಗೂ ಚಿಕಿತ್ಸೆಗೆ ವಿಮ್ಸ್‍ಗೆ ಕಳುಹಿಸಿ ಚಿಕಿತ್ಸೆ ನೀಡಲಾಗುವುದು ಎಂದರು.