ಪೂರ್ವಭಾವಿ ಸಭೆ


ಲಕ್ಷ್ಮೇಶ್ವರ,ಡಿ30: ತಹಶೀಲ್ದಾರರ ಕಾರ್ಯಾಲಯದಲ್ಲಿ ತಹಶೀಲ್ದಾರ್ ವಾಸುದೇವಸ್ವಾಮಿ ಅವರ ಅಧ್ಯಕ್ಷತೆಯಲ್ಲಿ 2024 ಜನವರಿ 1 ರಂದು ಆಚರಿಸಲ್ಪಡುವ ಅಮರಶಿಲ್ಪಿ ಜಕಣಾಚಾರ್ಯ ಅವರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.
ತಹಶೀಲ್ದಾರ ಕಾರ್ಯಾಲಯದಲ್ಲಿ ಸೇರಿದ್ದ ಈ ಪೂರ್ವಭಾವಿ ಸಭೆಯಲ್ಲಿ ವಿಶ್ವಕರ್ಮ ಸಮಾಜದ ಮುಖಂಡರು ಪದಾಧಿಕಾರಿಗಳು ಪಾಲ್ಗೊಂಡಿದ್ದರು ಈ ಸಂದರ್ಭದಲ್ಲಿ ತಹಸಿಲ್ದಾರ್ ವಾಸುದೇವ್ ವಿ ಸ್ವಾಮಿಯವರು ಮಾತನಾಡಿ ತಾಲೂಕ ಆಡಳಿತ ವತಿಯಿಂದ ಎಲ್ಲ ಇಲಾಖೆಗಳ ಕಚೇರಿಗಳಲ್ಲಿ ಅಮರಶಿಲ್ಪಿ ಜಕಣಾಚಾರ್ಯರ ಭಾವಚಿತ್ರಕ್ಕೆ ನಮನ ಸಲ್ಲಿಸುವುದು ಮತ್ತು ಶಿಲ್ಪಕಲೆಗೆ ಅವರು ನೀಡಿದ ಕೊಡುಗೆ ಬಗ್ಗೆ ಸ್ಮರಣೆ ಮಾಡಿಕೊಳ್ಳುವುದು ಅವರ ಕೊಡುಗೆ ಬಗ್ಗೆ ನೆನಪಿಸಿಕೊಳ್ಳಲಾಗುವುದು ಎಂದರು.
ಪೂರ್ವಭಾವಿ ಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಕೃಷಿ ಇಲಾಖೆ ಪುರಸಭೆ ಪಶು ವೈದ್ಯಕೀಯ ಸೇವಾ ಇಲಾಖೆ ಎಪಿಎಂಸಿ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಗೂ ವಿಶ್ವಕರ್ಮ ಸಮಾಜದ ತಾಲೂಕ ಘಟಕದ ಅಧ್ಯಕ್ಷರಾದ ಈರಣ್ಣ ಬಡಿಗೇರ ಮೌನೇಶ ಬಾಲೆ ಹೊಸೂರು ಕಾಳಪ್ಪ ಬಡಿಗೇರ ರಾಮಚಂದ್ರ ಬಡಿಗೇರ ಗಂಗಾಧರ ಬಾಲೆ ಹೊಸೂರು ಮನೋಹರ್ ಪತ್ತಾರ ಶಿವಾನಂದ ಬಡಿಗೇರ ರವಿ ಬಡಿಗೇರ ರಮೇಶ್ ಬಡಿಗೇರ ರಾಘು ಬಡಿಗೇರ ಮಹಾಂತ ಬಡಿಗೇರ ಬಸವರಾಜ ಪತ್ತಾರ ದ್ಯಾಮಣ್ಣ ಬಡಿಗೇರ ಸೇರಿದಂತೆ ಗ್ರೇಡ್ 2 ತಹಸಿಲ್ದಾರ್ ಮಂಜುನಾಥ ಅಮಾಸಿ, ಉಪ ತಹಸಿಲ್ದಾರ್ ರೇಣುಕ ಹರಿಜನ, ಕಂದಾಯ ನಿರೀಕ್ಷಕ ಬಸವರಾಜ್ ಕಾತ್ರಾಳ, ಪ್ರಶಾಂತ ಸನದಿ, ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.