ಪೂರ್ವಭಾವಿ ಸಭೆ

ಕಲಬುರಗಿ:ನ.22:ಇಂದು ಕಲಬುರ್ಗಿಯಲ್ಲಿ ಛಲವಾದಿ ಸಮುದಾಯದ ನಾಯಕರು ಹಾಗೂ ಮಾಜಿ ಶಾಸಕರಾದ ಜಿ ಎನ್ ನಂಜುಂಡಸ್ವಾಮಿ ಹಾಗೂ ವೈ ಸಂಪಂಗಿ ಕಲಬುರಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಂಬಾರಾಯ ಅಷ್ಠಗಿ, ಛಲವಾದಿ ಮಹಾಸಭಾದ ನಿರ್ದೇಶಕರಾದ ಸಿದ್ದರಾಜು , ಮಹೇಂದ್ರ ಕೌತಾಳ ರವರ ನೇತೃತ್ವದಲ್ಲಿ ಚಲವಾದಿ ಸಮಾಜದ (ಬಲಗೈ) ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಪೂರ್ವಭಾವಿ ಸಭೆಯನ್ನು ಮಾಡಲಾಯಿತು.
ಈ ಸಭೆಯಲ್ಲಿ ಛಲವಾದಿ ಸಮುದಾಯದ ಮುಖಂಡರಾದ ದೇವೇಂದ್ರ ಸಿನ್ನೂರ್, ಛಲವಾದಿ ಸಮುದಾಯದ ಮುಖಂಡರು ಹಾಗೂ ಮಹಾನಗರ ಪಾಲಿಕೆಯ ಸದಸ್ಯ ವಿಶಾಲ ದರ್ಗಿ, ಸಮುದಾಯದ ಮುಖಂಡರುಗಳಾದ ಶಿವಯೋಗಿ ನಾಗನಳ್ಳಿ ಅವಿನಾಶ್ ಗಾಯಕ್ವಾಡ್ ಶಾಂತವೀರ ಬಡಿಗೇರ್ ಚಂದ್ರಶೇಖರ್ ಬಬಲಾದ ರಾಜಕುಮಾರ್ ಕಗ್ಗನ್ ಮಡಿ ಪುಂಡಲೀಕ್ ಗಾಯಕ್ವಾಡ್, ಸಂತೋಷ ಹಾದಿಮನಿ ಸೇರಿದಂತೆ ಬಿಜೆಪಿ ಪಕ್ಷದ ಛಲವಾದಿ (ಬಲಗೈ) ಸಮುದಾಯದ ಪ್ರಮುಖರು ಭಾಗವಹಿಸಿದ್ದರು.