ಸಂಜೆವಾಣಿ ವಾರ್ತೆ
ಸಿರುಗುಪ್ಪ: ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಪಿಂಜಾರ್ ಸಮುದಾಯ ಭವನದ ಆವರಣದಲ್ಲಿ ಕರ್ನಾಟಕ ರಾಜ್ಯ ನದಾಫ್ ಪಿಂಜಾರ್ ಸಂಘದ ವತಿಯಿಂದ ತಾಲ್ಲೂಕು ಪಿಂಜಾರ್ ಘಟಕದ ಚುನಾವಣೆಯ ಪೂರ್ವಭಾವಿ ಸಭೆ ಹಾಗೂ ಅಜೀವ ಸದಸ್ಯತ್ವದ ಸ್ಮಾರ್ಟ್ ಐಡಿ ಕಾರ್ಡ್ ವಿತರಣಾ ಕಾರ್ಯಕ್ರಮ ನಡೆಸಲಾಯಿತು.
ಬಳ್ಳಾರಿ ಜಿಲ್ಲೆಯಲ್ಲಿ 19-11-2023 ನಡೆಯುವ ಪಿಂಜಾರ್ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷರ ಚುನಾವಣೆಯನ್ನು ನಡೆಸಲಾಗುತ್ತದೆ, ಅದ್ದರಿಂದ ಸಂಘದ ಎಲ್ಲಾ ಸದಸ್ಯರು ತಪ್ಪದೆ ಮತದಾನ ಮಾಡಬೇಕು ಮತ್ತು ಈ ಸಂಘಟನೆಯಿಂದ ಸರ್ಕಾರದ ಸೌಲಭ್ಯಗಳನ್ನು ಸಮಾಜದ ಎಲ್ಲಾ ಕಟ್ಟ ಕಡೆಯ ವ್ಯೆಕ್ತಿಗೆ ತಲುಪಿಸುವ ಕೇಲಸವನ್ನು ಮಾಡಲು ಸಹಕಾರಿ ಯಾಗುತ್ತದೆ ಎಂದು ಬಳ್ಳಾರಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಅಲ್ಲಾಬಕಾಷ ತಿಳಿಸಿದರು.
ಸಿರುಗುಪ್ಪ ತಾಲ್ಲೂಕು ಕರ್ನಾಟಕ ರಾಜ್ಯ ಪಿಂಜಾರ/ನದಾಫ್ ಸಂಘದ ವತಿಯಿಂದ ಪಿಂಜಾರ ಜನಾಂಗದವರಿಗೆ ಅಜೀವ ಸದಸ್ಯತ್ವದ ಸ್ಮಾರ್ಟ್ ಕಾರ್ಡ್ ಅನ್ನು ಸಂಘದ ಸಂಸ್ಥಾಪಕರಾದ ದಿವಂಗತ ಡಾಕ್ಟರ್ ಹಿರೇ ಹಾಳ ಇಬ್ರಾಹಿಂ ಸಾಹೇಬ್ ಅವರ ಪುತ್ರ ದಾದಾ ಕಲಂದರ್ ಮತ್ತು ಜಿಲ್ಲಾ ಮಟ್ಟದ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಸಂಘದ ಅಜೀವ ಸದಸ್ಯತ್ವದ ಸ್ಮಾರ್ಟ್ ನನ್ನು ಸದಸ್ಯರಿಗೆ ನೀಡಲಾಯಿತು.
ರಾಜ್ಯ ಘಟಕದ ರಾಜ್ಯ ಖಜಾಂಚಿ ಟಿ.ಚಂದಸಾಬು, ಬಳ್ಳಾರಿ ಜಿಲ್ಲಾ ಘಟಕದಖಜಾಂಚಿ ಪಿ.ಮೌಲಾಸಾಬು, ಪಿ.ಶೇ ಕ್ಷವಲಿ, ವಿಭಾಗಯ ಕಾರ್ಯದರ್ಶಿ ಪಿ.ಮಾಬು ಬಾಷ, ಸಿರುಗುಪ್ಪ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ನಬೀಸಾಬು, ಸಿರುಗುಪ್ಪ ತಾಲ್ಲೂಕು ಘಟಕದ ಕಾರ್ಯದರ್ಶಿ ದಾದಾ ಕಲಂದರ್ ಹಾಗೂ ಸಮಾಜದ ಮುಖಂಡರಾದ ಎಸ್.ಖಾಸಿಂ ಸಬ್, ಎನ್.ಖಾದರ್ ಬಾಷಾ, ಎಂ.ಮಾಬುಸಾಬು, ಎಂ.ಬಂದೇನವಾಜ್ ಹಾಗೂ ಪಿಂಜಾರ ನದಾಫ್ ಸಮುದಾಯದ ಮುಖಂಡರು, ಯುವಕರು ಇದ್ದರು.