ಪೂರ್ವಜರ ಸ್ಮರಣಾರ್ಥ ನಿರ್ಗತಿಕರಿಗೆ ರೇಷನ್ ಕಿಟ್ ವಿತರಣೆ ಮಾಡಿದ ಮಕ್ಕಳು, ಮೊಮ್ಮಕ್ಕಳು

ಕೂಡ್ಲಿಗಿ.ಮೇ. 3 :- ಬರುವ ರಂಜಾನ್ ಹಬ್ಬದ ಪ್ರಯುಕ್ತ ಪಟ್ಟಣದ ಪೌರಕಾರ್ಮಿಕರು ಸೇರಿದಂತೆ ನಿರ್ಗತಿಕರ ಕುಟುಂಬಗಳನ್ನು ಗುರುತಿಸಿ ಪಟ್ಟಣದ ಶಾಮಿಲ್ ರಹೆಮಾನ್ ಸೇರಿದಂತೆ ಅವರ ದೊಡ್ಡಪ್ಪ ಚಿಕ್ಕಪ್ಪರ ಸಹೋದರರು, ಮಕ್ಕಳು, ಮೊಮ್ಮಕ್ಕಳು ಸೇರಿ ಪೂರ್ವಜರ ಸ್ಮರಣಾರ್ಥ ಭಾನುವಾರ 65ರೇಷನ್ ಕಿಟ್ ನ್ನು ವಿತರಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ರಹೆಮಾನ್ ಕೋವಿಡ್ ಮಹಾಮಾರಿ ಹೆಚ್ಚುತ್ತಿರುವ ಈ ದಿನಗಳಲ್ಲಿ ಲಾಕ್ ಡೌನ್ ನಿಂದ ಅನೇಕ ಬಡ ಕುಟುಂಬಗಳು ಒಪ್ಪತ್ತಿನ ಊಟಕ್ಕೂ ಕಷ್ಟಪಡುತಿದ್ದು ಲಾಕ್ ಡೌನ್ ನಿಂದ ದುಡಿಮೆ ಇಲ್ಲದೆ ಜೀವನ ಕಷ್ಟವಾಗಿರುವುದು ಕಾಣಿಸುತ್ತಿದ್ದು ರಂಜಾನ್ ಹಬ್ಬದ ಪ್ರಯುಕ್ತ ಕೋವಿಡ್ ಇರುವ ಈ ಸಂದರ್ಭದಲ್ಲಿ ನಮ್ಮ ಪೂರ್ವಜರ ಸ್ಮರಣಾರ್ಥ ಏನಾದರು ಮಾಡೋಣ ಎಂದುಕೊಂಡು ಕುಟುಂಬ ಸಮೇತರಾಗಿ ಚರ್ಚಿಸಿ ಜೀವನದ ಹಂಗು ತೊರೆದು ಇನ್ನೊಬ್ಬರ ಪ್ರಾಣ ಉಳಿಸುವ ಮತ್ತು ಪಟ್ಟಣ ಶುಚಿಗೊಳಿಸಿ ಸಾರ್ವಜನಿಕರ ಆರೋಗ್ಯ ಕಾಪಾಡುವ ಪೌರಕಾರ್ಮಿಕರಿಗೆ ಮತ್ತು ಬೇರೆ ರಾಜ್ಯದಿಂದ ಬದುಕಿನ ಬಂಡಿ ಕಟ್ಟಿಕೊಂಡು ಬಂದವರು ಈ ಕೋವಿಡ್ ಲಾಕ್ ಡೌನ್ ನಲ್ಲಿ ದುಡಿಮೆ ಇಲ್ಲದೆ ಕಷ್ಟವಾಗಿರುವ ಬಸ್ ನಿಲ್ದಾಣದ ಶೌಚಾಲಯ ಶುಚಿಗೊಳಿಸುವ ಬಿಹಾರದ ಕುಟುಂಬ ಹಾಗೂ ಇತರೆ ಬಡ ಮತ್ತು ನಿರ್ಗತಿಕರ ಕುಟುಂಬಗಳಿಗೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸೇರಿದಂತೆ ನಮ್ಮ ಪೂರ್ವಜರಾದ ದಿವಂಗತ ಫಕ್ರುದ್ದೀನ್ ಸಾಬ್, ಅಬ್ದುಲ್, ಅಜ್ಮತ್ ಉಲ್ಲಾ,ಮಹಮ್ಮದ್ ಖಾಸಿಂ, ದಿವಂಗತ ಇವರ ತಮ್ಮಂದಿರಾದ ಕಾಂಟ್ರಾಕ್ಟರ್,ಇಸ್ಮಾಯಿಲ್, ರಹಮತ್ಲ್ಲಾ, ಇವರ ಮಕ್ಕಳಾದ ಅಬ್ದುಲ್ ರಹ್ಮಾನ್, ನನ್ನೆ ಸಾಹೇಬ್ ಮಹಮ್ಮದ್ ಇಸಾಕ್ ಟೀಚರ್ ಇಂಜಿನಿಯರ್ ನಿಸಾರ್ ಅಹಮದ್ ಅಜ್ಮ್ ಬಾಷಾ ಖಾದರ್ ಭಾಷಾ ನಜೀರ್ ಅಹಮದ್ ರವರು ಸೇರಿಕೊಂಡು ರೇಷನ್ ಕಿಟ್ ವಿತರಿಸಿ ಮಹಾಮಾರಿ ಕೊರೋನಾ ಬೇಗನೇ ಜಗತ್ತನ್ನೇ ಬಿಟ್ಟು ತೊಲಗಲಿ ಎಲ್ಲಾ ಜನರು ಆರೋಗ್ಯದಿಂದ ಜೀವನ ಸಾಗಿಸಲಿ ಕೊರೋನಾ ಮುಕ್ತ ಪ್ರಪಂಚವಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸಿದರು.