ಪೂರ್ವಜರು ಹಾಕಿಕೊಟ್ಟ ಆಚಾರ-ವಿಚಾರ ಬಗ್ಗೆ ಅರಿವು ಅಗತ್ಯ

ಕೋಲಾರ, ಜ, ೨೦- ನಮ್ಮ ಪೂರ್ವಜರು ಹಾಕಿಕೊಟ್ಟ ಆಚಾರ-ವಿಚಾರ ಮತ್ತು ಸಂಪ್ರದಾಯಗಳನ್ನು ಇಂದಿನ ಮಕ್ಕಳಿಗೆ ತಲುಪುವಂತಹ ಕಾರ್ಯಕ್ರಮ ಮತ್ತು ಶಿಬಿರಗಳನ್ನು ನಿರಂತವಾಗಿ ಸಂಘಟಿಸಬೇಕು ಭಾರತ್ ಸ್ಕೌಟ್ಸ್ ಗೈಡ್ಸ್ ಕರ್ನಾಟಕ ರಾಜ್ಯ ಪ್ರಧಾನ ಆಯುಕ್ತರು ಹಾಗೂ ಮಾಜಿ ಸಚಿವರಾದ ಪಿ.ಜಿ.ಆರ್.ಸಿಂಧ್ಯಾ ರವರು ಕರೆ ನೀಡಿದರು.
ಕೋಲಾರ ನಗರದ ಸ್ಕೌಟ್ ಭವನದಲ್ಲಿ ಭಾರತ್ ಸ್ಕೌಟ್ಸ್ ಗೈಡ್ಸ್ ಕೋಲಾರ, ರೋಟರಿ ಕೋಲಾರ ನಂದಿನಿ ಮತ್ತು ಪ್ರಕ್ರಿಯೆ ಸಂಸ್ಥೆಯ ಸಹಯೋಗದಲ್ಲಿ ಆಯೋಜಿದ್ದ ಸಂಕ್ರಾತಿ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಇಂದಿನ ಯುವ ಪೀಳಿಗೆ ಮತ್ತು ಶಾಲಾ ಮಕ್ಕಳು ಮೊಬೈಲ್ ಗಳನ್ನು ಸಾಕಷ್ಟು ಬಳಸುತ್ತಿದ್ದು , ಇದರಿಂದ ಮಕ್ಕಳಿಗೆ ದೃಷ್ಟಿ ಸಮಸ್ಯೆ ಹೆಚ್ಚಾಗುತ್ತಿರುವುದರ ಜೊತೆಗೆ ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ, ಸ್ಕೌಟ್ಸ್ ಗೈಡ್ಸ್ ಸಂಸ್ಥೆಗೆ ನೂರು ವರ್ಷಗಳನ್ನು ಪೂರ್ಣಗೊಳಿಸಿದ ಕೀರ್ತಿ ಮತ್ತು ನೂರು ವರ್ಷಗಳ ಹಿಂದೆಯೆ ಜಾಗತಿಕ ತಾಪಮಾನವನ್ನು ತಡೆಯಲು ಬೇಕಾದಂತಹ ಯೋಜನೆಗಳನ್ನು ಹಮ್ಮಿಕೊಂಡು, ಈ ಯೋಜನೆಗಳಲ್ಲಿ ಶಾಲಾ ಮಕ್ಕಳನ್ನು ತೊಡಗಿಸುವ ಮೂಲಕ ಸಮಾಜಕ್ಕೆ ತಮ್ಮದೇ ಆದಂತಹ ಕೊಡುಗೆಯನ್ನು ನೀಡುವಂತೆ ಪ್ರೇರೇಪಿಸುತ್ತಿದೆ. ಇಂತಹ ಸಂಸ್ಥೆಯಲ್ಲಿ ಎಲ್ಲಾ ಬಾಲಕ ಬಾಲಕಿಯರು ತೊಡುವಂತೆ ಪ್ರೇರೇಪಿಸುವಲ್ಲಿ ಹಾಗೂ ಅವಕಾಶವನ್ನು ಮಾಡಿಕೊಡುವಲ್ಲಿ ಶಾಲಾ ಕಾಲೇಜು ಶಿಕ್ಷಕರ ಪಾತ್ರ ಮಹತ್ವದ್ದು ಎಂದು ತಿಳಿಸಿದರು.
ಜಿಲ್ಲಾ ಮುಖ್ಯ ಆಯುಕ್ತರಾದ ಕೆ.ವಿ.ಶಂಕರಪ್ಪ ರವರು ಮಾತನಾಡಿ ಸ್ಕೌಟ್ಸ್ ಗೈಡ್ಸ್ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವ ಮೂಲಕ ಉತ್ತಮ ನಾಗರೀಕರನ್ನು ತಯಾರು ಮಾಡಬಹುದಾಗಿದೆ, ತರಬೇತಿ ಪಡೆದ ಎಲ್ಲಾ ಶಿಕ್ಷಕರು ತಮ್ಮ ಶಾಲಾ ಕಾಲೇಜುಗಳಲ್ಲಿ ವಾರದಲ್ಲಿ ಒಂದು ಅವಧಿಯನ್ನು ಸ್ಕೌಟ್ಸ್ ಗೈಡ್ಸ್ ಚಟುವಟಿಕೆಗಳಲ್ಲಿ ತೊಡಗಿಸಬೇಕು, ಈ ನಿಟ್ಟಿನಲ್ಲಿ ತಮಗೆ ಬೇಕಾದ ಮಾರ್ಗದರ್ಶನ ಹಾಗೂ ಸಹಕಾರವನ್ನು ಜಿಲ್ಲಾ ಸಂಸ್ಥೆ ನೀಡಲು ಸದಾ ಸಿದ್ದ. ಸಂಕ್ರಾತಿ ಹಬ್ಬ ವನ್ನು ಹಿಂದಿನ ದಿನಗಳಲ್ಲಿ ಬಹಳ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದರು, ಈ ಹಬ್ಬವನ್ನು ಎತ್ತುಗಳ ಹಬ್ಬವೆಂದೇ ಕರೆಯುತ್ತಿದ್ದರು, ಆದರೆ ಇಂದು ಎತ್ತುಗಳೆ ಕಾಣದಾಗಿದೆ, ಇದಕ್ಕೆ ನಾನಾ ಕಾರಣಗಳಿರಬಹುದು, ನಾವು ಈ ರೀತಿ ಹಬ್ಬಗಳನ್ನು ಆಚರಿಸುವ ಮೂಲ ಉದ್ದೇಶ ಇಂದಿನ ಯುವ ಪೀಳಿಗೆಗೆ ನಮ್ಮ ಸಂಪ್ರದಾಯಗಳನ್ನು ಪರಿಚಯಿಸುವುದು ಹಾಗೂ ಮಕ್ಕಳು ತಮ್ಮ ಮನೆಗಳಲ್ಲಿ ಆಚರಣೆ ಮಾಡಲು ಕಲಿಕೆಯಾಗಲಿದೆ, ನಮ್ಮ ಪರಂಪರೆಯನ್ನು ಮುಂದಿನ ಭವಿಷ್ಯಕ್ಕೆ ತೆಗೆದುಕೊಂಡು ಹೋಗುವಲ್ಲಿ ಶಿಕ್ಷಕರ ಶ್ರಮ ಮಹತ್ವದ್ದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಬಿಸಪ್ಪಗೌಡ, ಉಪಾಧ್ಯಕ್ಷರಾದ ಡಿ.ಎಲ್.ನಾಗರಾಜ್, ಡಾ||ಚಂದ್ರಶೇಖರ್, ಶಶಿಕಾಂತ್, ಚೌಡೇಶ್ವರಿ ರಾಮು, ಕುರ್ಕಿ ರಾಜೇಶ್ವರಿ, ಆಯುಕ್ತರಾದ ಜಯಶ್ರೀ,ಸುರೇಶ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಮುಖ್ಯ ಆಯುಕ್ತರಾದ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ವಿ.ಎಂ.ನಾರಾಯಣಸ್ವಾಮಿ, ಜಂಟಿ ಕಾರ್ಯದರ್ಶಿ ಉಮಾದೇವಿ, ಸಹ ಕಾರ್ಯದರ್ಶಿ ಸ್ಕೌಟ್ ಬಾಬು, ಖಚಾಂಚಿ ಉಮೇಶ್, ತರಬೇತಿ ಆಯುಕ್ತರಾದ ಮುನಿನಾರಾಯಣಪ್ಪ, ಗೌರಾಬಾಯಿ, ಬೇವಹಳ್ಳಿ ಶಂಕರ್, ವಿಶ್ವನಾಥ್, ಪ್ರಕ್ರಿಯೆ ಸಂಸ್ಥೆಯ ಗ್ರೇಸಿ, ಪ್ರಭಾವತಿ ಉಪಸ್ಥಿತರಿದ್ದರು.