ಪೂರ್ವಜರು ಮಾನಸಿಕ ನೆಮ್ಮದಿಗಾಗಿ ದೇವಾಲಯ ಸ್ಥಾಪಿಸಿದ್ದರು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ನ.21: ಅನಾದಿ ಕಾಲದಿಂದಲೂ ನಮ್ಮ ಪೂರ್ವಜರು ಮಾನಸಿಕ ನೆಮ್ಮದಿಗಾಗಿ ದೇವಾಲಯಗಳನ್ನು ಸ್ಥಾಪಿಸಿ ಭಕ್ತಿಭಾವದಿಂದ ಪೂಜಿಸುತ್ತಿದ್ದುದು ಇಲ್ಲಿಯವರೆಗೂ ಬೆಳೆದು ಬಂದಿರುವ ಸಂಪ್ರದಾಯವಾಗಿದೆ ಎಂದು ಸಮಾಜಸೇವಕ ಹಾಗೂ ಕಾಂಗ್ರೆಸ್ ಮುಖಂಡ ವಿಜಯರಾಮೇಗೌಡ ಅಭಿಪ್ರಾಯಪಟ್ಟರು.
ಅವರು ತಾಲ್ಲೂಕಿನ ಬೂಕನಕೆರೆ ಹೋಬಳಿಯ ಯಗಚಗುಪ್ಪೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಬಸವೇಶ್ವರ ದೇವಾಲಯದ ಗೋಪುರ ಕಳಸವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಪುರಾತನ ಕಾಲದಿಂದಲೂ ನಮ್ಮ ಪೂರ್ವಜರು ಸೂರ್ಯ ಚಂದ್ರರನ್ನು ದೇವರುಗಳೆಂದು ಪೂಜಿಸುತ್ತಿದ್ದರು. ನಂತರದಲ್ಲಿ ನಾಗರೀಕತೆ ಬೆಳೆದಂತೆ ವಿವಿಧ ರಾಜವಂಶಗಳು, ವಿವಿಧ ಬಗೆಯ ದೇಗುಲಗಳನ್ನು ನಿರ್ಮಿಸಿ ಮಾನಸಿಕ ನೆಮ್ಮದಿಗಾಗಿ ಆ ದೇವರುಗಳನ್ನು ಪೂಜಿಸಲು ಆರಂಭಿಸಿದರು. ಇದೇ ಸಂಪ್ರದಾಯ ಮುಂದುವರಿದು ದೇಗುಲಗಳನ್ನು ಭಕ್ತಿಭಾವದಿಂದ ನೋಡುವ, ಸ್ಥಾಪಿಸುವ ಕೆಲಸಗಳನ್ನು ನಾವುಗಳು ಮಾಡುತ್ತಿದ್ದೇವೆ. ಕಷ್ಟಕಾಲದಲ್ಲಿ ಮಾನವನಿಗೆ ತಾನು ನಂಬಿರುವ ದೇವಾನುದೇವತೆಗಳು ಸಂಕಷ್ಟಗಳನ್ನು ಪರಿಹರಿಸುತ್ತಾನೆ ಎಂಬ ಪ್ರತೀತಿ ಬೆಳೆದುಬಂದಿದ್ದು ಇಂದು ಈ ಗ್ರಾಮದಲ್ಲಿ ಹಬ್ಬದ ರೀತಿಯಲ್ಲಿ ದೇವಾಲಯದ ಗೋಪುರಕಳಸ ಉದ್ಘಾಟನೆ ಮಾಡಿರುವುದು ಸಂತಸ ತಂದಿದೆ ಎಂದರು.
ಇದೇ ಸಂದರ್ಭದಲ್ಲಿ ತಾ.ಪಂ. ಮಾಜಿ ಸದಸ್ಯ ಮಾಧವಪ್ರಸಾದ್, ಅಘಲಯಜಗದೀಶ್, ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್, ಗ್ರಾಮದ ಹಿರಿಯರಾದ ಶಿವಲಿಂಗಪ್ಪ, ಪುಟ್ಟಸ್ವಾಮಪ್ಪ, ಮಲ್ಲೇಶಪ್ಪ, ಶಂಕ್ರಪ್ಪ, ಶಿವಕುಮಾರಪ್ಪ, ಸಣ್ಣೇಗೌಡ, ಗ್ರಾ.ಪಂ.ಸದಸ್ಯರಾದ ರತ್ನಾಚಾರಿ, ಸಂತೋಷ, ಕುಮಾರ್, ಸೋಮಶೇಖರಪ್ಪ, ಬಾಂಬೆರಾಜಶೇಖರಪ್ಪ, ಎಲ್‍ಐಸಿ ಶಿವಪ್ಪ, ಪ್ರಥಮದರ್ಜೆ ಗುತ್ತಿಗೆದಾರರಾದ ನಂದೀಶ್, ಮಹೇಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.