ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ಯೋಜನೆಗಳ ಜನರ ಕೈ ಸೇರಲಿವೆ-ಡಿಕೆ ಸುರೇಶ್

ಆನೇಕಲ್.ಏ೬: ಸಹಕಾರಿ ಸಂಸ್ಥೆಗಳಲ್ಲಿ ಸೇವಾ ಮನೋಭಾವವಿದ್ದರೆ ಮಾತ್ರ ಸರ್ಕಾರದ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಜನರ ಕೈಸೇರಲಿದೆ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ಅವರು ಪಟ್ಟಣದ ಆನೇಕಲ್ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ವಾಣಿಜ್ಯ ಮಳಿಗೆಗಳ ಉದ್ಟಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು, ಈವತ್ತಿನ ದಿನಗಳಲ್ಲಿ ಸಹಕಾರ ಸಂಸ್ಥೆಗಳು ರಾಜಕೀಯ ಪ್ರೇರಿತವಾಗಿ, ಕೇವಲ ಅದಿಕಾರ ಕೋಸ್ಕರ ಸಹಕಾರ ಸಂಘಗಳನ್ನು ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತಿದೆ ಹೊರೆತು ಜನರ ಅಭಿವೃದ್ದಿ ಪರ ನಿಂತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು. ಸಹಕಾರ ಸಂಘಗಳಿಗೆ ಸರ್ಕಾರಗಳು ವಾರ್ಷಿಕವಾಗಿ ಕೋಟ್ಯಾಂತರ ರೂಪಾಯಿ ಹಣ ಸಬ್ಸಿಡಿ ರೂಪದಲ್ಲಿ ಬಿಡುಗಡೆಯಾಗುತ್ತಿದ್ದು ಸಹಕಾರ ಸಂಸ್ಥೆಗಳ ಆಡಳಿತ ಮಂಡಳಿಯವರು ರಾಜಕೀಯವನ್ನು ಬಿಟ್ಟು ರೈತರ, ಜನರ ರಕ್ಷಣೆಗೆ ನಿಲ್ಲಬೇಕು ಎಂದು ಕಿವಿ ಮಾತು ಹೇಳಿದರು.
ಶಾಸಕ ಬಿ. ಶಿವಣ್ಣ ಮಾತನಾಡಿ, ಆನೇಕಲ್ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಯಾವುದೇ ಸಹಕಾರ ನೀಡಲು ಸದಾ ಸಿದ್ಧನಿರುತ್ತಾನೆ, ಸರ್ಕಾರದಿಂದ ಆಗಲಿ ಶಾಸಕರ ಅನುದಾನ ಆಗಲಿ ಯಾವುದಾದರೂ ಇದ್ದರೆ ನನ್ನ ಗಮನಕ್ಕೆ ತಂದರೆ ನಾನು ನಿಮಗೆ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ಆನೇಕಲ್ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ್ ರೆಡ್ಡಿ ಮಾತನಾಡಿ ಅಳಿವಿನ ಅಂಚಿನಲ್ಲಿದ್ದ ನಮ್ಮ ಸಂಘವನ್ನು ಇಂದು ಸಂಘದ ಎಲ್ಲಾ ನಿರ್ಧೇಶಕರ ಸಹಕಾರದಿಂದ ಸಂಘವನ್ನು ಅಭಿವೃದ್ದಿಯತ್ತಾ ಕೊಂಡಯ್ಯಲಾಗಿದೆ ಜೊತೆಗೆ ಸರ್ಕಾರ ಮತ್ತು ಸಂಘದ ವತಿಯಿಂದ ಸಿಗುವ ಸವಲತ್ತುಗಳನ್ನು ಜನರ ಮನೆ ಭಾಗಿಲಿಗೆ ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಮೂಲ್ ಮಾಜಿ ಅದ್ಯಕ್ಷ ಆರ್.ಕೆ. ರಮೇಶ್. ಬಮೂಲ್ ನಿರ್ದೇಶಕ ಬಿ.ಜೆ. ಆಂಜಿನಪ್ಪ. ತಾಲ್ಲೂಕು ಪಂಚಾಯಿತಿ ಅದ್ಯಕ್ಷೆ ಕವಿತಾ ಸಂಪತ್. ಕರ್ಪೂರು ಗ್ರಾಮ ಪಂಚಾಯಿತಿ ಅದ್ಯಕ್ಷ ದಿನ್ನೂರು ರಾಜು. ಮುಖಂಡರಾದ ಎಂ.ಬಿ.ಐ.ನಾಗರಾಜ್. ಸೋಮಶೇಖರ್ ಮತ್ತು ಆನೇಕಲ್ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.