ಪೂರ್ಣಿಮಾ ವಿದ್ಯಾಸಂಸ್ಥೆ : ೧೦೦ ಜನ ಬಡ ಶಿಕ್ಷಕರಿಗೆ ಆಹಾರ ಕಿಟ್ ವಿತರಣೆ

 • ಜಿಲ್ಲೆಯ ಶಾಸಕರಿಗೆ ಮಂತ್ರಿ ಸ್ಥಾನ ನೀಡಲು ಕೇಶವರೆಡ್ಡಿ ಒತ್ತಾಯ
  ರಾಯಚೂರು.ಮೇ.೩೧-ಕೊರೊನಾ ಮಹಾಮಾರಿಯಿಂದ ಖಾಸಗಿ ಶಾಲೆಯ ಶಿಕ್ಷಕರು ಸಂಕಷ್ಟಕ್ಕೀಡಾಗಿದ್ದು, ಆದ್ದರಿಂದ ಇಂದು ಸುಮಾರು ೧೦೦ ಜನರಿಕೆ ಆಹಾರ ಕಿಟ್ ವಿತರಿಸಲಾಗುತ್ತದೆ ಎಂದು ಪೂರ್ಣಿಮಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಕೇಶವರೆಡ್ಡಿ ಅವರು ಹೇಳಿದರು.
  ಅವರಿಂದು ತಮ್ಮ ೨೫ ನೇ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಖಾಸಗಿ ಶಿಕ್ಷಣ ಸಂಸ್ಥೆಯ ಬಡ ಶಿಕ್ಷಕರಿಗೆ ಕಿಲ್ಲೇ ಬೃಹನ್ ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳ ಸಂಯೋಗದಲ್ಲಿ ಆಹಾರ ಕಿಟ್ ವಿತರಿಸಿ ಮಾತನಾಡುತ್ತಾ, ಕೊರೊನಾ ಎರಡನೇ ಅಲೆಯಿಂದ ಶಿಕ್ಷಕರು ಸಂಕಷ್ಟದಲ್ಲಿದ್ದು, ಅವರಿಗೆ ನನ್ನಿಂದ ಸ್ವಲ್ಪ ಸಹಾಯ ಮಾಡಲು ಮುಂದಾಗಿದ್ದೇನೆ.
  ದೇಶ, ರಾಷ್ಟ್ರ ಅಭಿವೃದ್ಧಿಯಲ್ಲಿ ಮುಂದು ಬರಬೇಕಾದರೆ ಗುರುಗಳೇ ಮುಖ್ಯ ಕಾರಣ.
  ಇಂದು ನಾನು ೧೦೦ ಜನಕ್ಕೆ ನೀಡುತ್ತೇನೆ. ಮುಂದೆ ೫೦೦ ಜನಕ್ಕೂ ಆಹಾರ ಕಿಟ್ ವಿತರಿಸುತ್ತೇನೆ. ಈಗಾಗಲೇ ಶಿಕ್ಷಣ ಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಶಿಕ್ಷಕರಿಗೆ ವಿಶೇಷ ಆರ್ಥಿಕ ಸಹಾಯ ನೀಡಲು ಒತ್ತಾಯ ಮಾಡಿದ್ದೇನೆ ಎಂದರು.
  ಕೊರೊನಾ ಮಹಾಮಾರಿಯ ವಿರುದ್ಧ ಜಿಲ್ಲಾಡಳಿತ ಅಗಳಿರಳು ಎನ್ನದೆ ಕೆಲಸ ಮಾಡಿದ್ದು, ಅವರಿಗೆ ಬೆಂಬಲವಾಗಿ ಜಿಲ್ಲೆಯ ನಾಯಕರಿಗೆ ಮಂತ್ರಿ ಸ್ಥಾನವನ್ನು ಮುಖ್ಯ ಮಂತ್ರಿಗಳು ನೀಡಬೇಕು.
  ಜಿಲ್ಲೆಯಲ್ಲಿ ೨ ರಿಂದ ೩ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಆದ್ದರಿಂದ ನಮ್ಮ ಜಿಲ್ಲೆಯ ಶಾಸಕರಿಗೆ ಮಂತ್ರಿ ಸ್ಥಾನವನ್ನು ನೀಡಿದರೆ, ಜಿಲ್ಲೆಗೆ ಯಾವುದೇ ಸಮಸ್ಯೆ ಬರುವುದಿಲ್ಲ. ಕೊರೊನಾ ಹೆಸರಿನಲ್ಲಿ ರಾಜಕೀಯ ಮಾಡುವ ಮಂತ್ರಿಯನ್ನು ತೆಗೆದುಹಾಕಿ ಜಿಲ್ಲೆಯ ನಾಯಕರಿಗೆ ಮಂತ್ರಿಸ್ಥಾನ ನೀಡಲು ಒತ್ತಾಯಿಸಿದರು.
  ಈ ಸಂದರ್ಭದಲ್ಲಿ ಪತ್ನಿ ರೇಖಾ ಶ್ರೀನಿವಾಸ ರೆಡ್ಡಿ, ಎ.ಚಂದ್ರಶೇಖರ್, ರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.